ಮಕ್ಕಳು ಮಾಡಿಕೊಳ್ಳುವ ಬಗ್ಗೆ ಕರೀನಾ ಮತ್ತು ಸೈಫ್ ಮಾತಾಡಿಕೊಂಡಿದ್ದೇನು?

ನನಗೆ ಅಮ್ಮನಾಗಲು ತುಂಬಾ ಇಷ್ಟ. ನನಗೆ ನಟನೆ ಎಂದರೂ ತುಂಬಾ ಇಷ್ಟ. ಹೀಗಾಗಿ ಜೀವನದಲ್ಲಿ ಯಾವುದನ್ನೂ ತ್ಯಾಗ ಮಾಡುವ ಪರಿಸ್ಥಿತಿಯನ್ನು ತಂದುಕೊಳ್ಳುವುದಿಲ್ಲ ಎಂದು ಮುಂಚೆಯೇ ನಿರ್ಧರಿಸಿ ಬಿಟ್ಟಿದ್ದೆ. ಸೈಪ್ ಗೂ ಅದನ್ನೇ ಹೇಳಿದ್ದೆ: ಕರೀನಾ ಕಪೂರ್
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಂಬೈ: ಪ್ರೆಗ್ನನ್ಸಿ ಕುರಿತು 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕವನ್ನು ಹೊರತಂದಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಆ ಪುಸ್ತಕದಲ್ಲಿ ಗರ್ಭಿಣಿಯ ಆಂತರಿಕ ತೊಳಲಾಟ ಹಾಗೂ ಆಕೆ ಎದುರಿಸುವ ತಳಮಳವನ್ನು ಅನುಭವ ಸಹಿತ ವಿವರಿಸಿದ್ದಾರೆ. ಪುಸ್ತಕದಲ್ಲಿ ಕೇವಲ ಗರ್ಭಿಣಿಯಾದಾಗಿನ ಸಂದರ್ಭ ಮಾತ್ರವಲ್ಲದೆ ಅದಕ್ಕೂ ಮುಂಚೆ ತಾವು ಪತಿ ಸೈಫ್ ಜೊತೆ ಮಕ್ಕಳು ಮಾಡಿಕೊಳ್ಳುವ ಬಗ್ಗೆ ನಡೆಸಿದ ಮಾತುಕತೆಯ ವಿವರಗಳನ್ನೂ ಬಿಚ್ಚಿಟ್ಟಿದ್ದಾರೆ.

ಮಕ್ಕಳು ಮಾಡಿಕೊಳ್ಳುವ ಮೊದಲು ನಾವಿಬ್ಬರೂ ದೀರ್ಘ ಚರ್ಚೆ ಮಾಡಿದ್ದೇವೆ. ನನಗೆ ಅಮ್ಮನಾಗಲು ತುಂಬಾ ಇಷ್ಟ. ನನಗೆ ನಟನೆ ಎಂದರೂ ತುಂಬಾ ಇಷ್ಟ. ಹೀಗಾಗಿ ಜೀವನದಲ್ಲಿ ಯಾವುದನ್ನೂ ತ್ಯಾಗ ಮಾಡುವ ಪರಿಸ್ಥಿತಿಯನ್ನು ತಂದುಕೊಳ್ಳುವುದಿಲ್ಲ ಎಂದು ಮುಂಚೆಯೇ ನಿರ್ಧರಿಸಿ ಬಿಟ್ಟಿದ್ದೆ. ಸೈಪ್ ಗೂ ಅದನ್ನೇ ಹೇಳಿದ್ದೆ. ನಾವಿಬ್ಬರೂ ನಮ್ಮ ನಡುವಿನ ಸಂಬಧವನ್ನು ಗಟ್ಟಿಗೊಳಿಸಲು ತುಂಬಾ ಕಷ್ಟ ಪಟ್ಟಿದ್ದೇವೆ. ಒಬ್ಬರಿಗೊಬ್ಬರು ನೆರವಾಗಿದ್ದೇವೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂದು ಕರೀನಾ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಸೆಲಬ್ರಿಟಿ ಮಹಿಳೆಯರು ಗರ್ಭಿಣಿಯಾದಾಗ ಹೊರ ಜಗತ್ತು ಅದನ್ನೂ ಗ್ಲ್ಯಾಮರಸ್ ಆಗಿಯೇ ನೋಡುತ್ತದೆ. ಗರ್ಭಿಣಿಯರಿಗೆ ಸಹಜವಾಗಿ ಆಗುವ ನೋವು ತಳಮಳ ಸೆಲಬ್ರಿಟಿಗಳಿಗೆ ಆಗುವುದಿಲ್ಲ ಎನ್ನುವ ರೀತಿಯಲ್ಲಿ ಅವರನ್ನು ನೋಡುತ್ತಾರೆ. ತಮ್ಮ ವಿಷಯದಲ್ಲೂ ಹಾಗೇ ಆಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ತಾವು ಗರ್ಭಿಣಿಯಾದ ಸಮಯದಲ್ಲಿ ಹೊರಜಗತಿನ ಮುಂದೆ ಕ್ಯಾಮೆರಾ ಎದುರು ಪೋಸ್ ನೀಡುವ ಸಂದರ್ಭದಲ್ಲೂ ತಳಮಳವನ್ನು ಅನುಭವಿಸುತ್ತಿದ್ದುದಾಗಿ ಅವರು ಹೇಳಿದ್ದಾರೆ. 

ಕರೀನಾ ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮವಿತ್ತಿದ್ದರು. ಅದಕ್ಕೆ ಜೆಹ್ ಎಂದು ಹೆಸರಿಟ್ಟಿದ್ದು ಸುದ್ದಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com