ನಟ ಸುನೀಲ್ ಶೆಟ್ಟಿ ಕುಟುಂಬದ ಜೊತೆ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಕೆಎಲ್ ರಾಹುಲ್!

ತಡಪ್ ಚಿತ್ರದ ಸ್ಕ್ರೀನಿಂಗ್ ವೇಳೆ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕುಟುಂಬದ ಜೊತೆ ಕಾಣಿಸಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ಕುಟುಂಬ
ಸುನೀಲ್ ಶೆಟ್ಟಿ ಕುಟುಂಬ

ನವದೆಹಲಿ: ತಡಪ್ ಚಿತ್ರದ ಸ್ಕ್ರೀನಿಂಗ್ ವೇಳೆ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕುಟುಂಬದ ಜೊತೆ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಮನ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ತಡಪ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶುಕ್ರವಾರ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ಬುಧವಾರ ರಾತ್ರಿ ಮುಂಬೈನಲ್ಲಿ ವಿಶೇಷ ಅತಿಥಿಗಳಿಗಾಗಿ ಚಿತ್ರದ ಪ್ರದರ್ಶನ ನಡೆದಿದ್ದು, ಎಲ್ಲರ ಕಣ್ಣು ವಿಶೇಷ ಅತಿಥಿಯತ್ತ ನೆಟ್ಟಿತ್ತು. ಅದು ಕ್ರಿಕೆಟಿಗ ಕೆಎಲ್ ರಾಹುಲ್.

ಹೌದು, ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಪ್ರೀತಿಸುತ್ತಿದ್ದಾರೆ. ಹೀಗಾಗಿ ಈ ಸ್ಕ್ರೀನಿಂಗ್‌ಗಾಗಿ ರಾಹುಲ್ ಅಥಿಯಾ ಜೊತೆ ಕೈಜೋಡಿಸಿ ಆಗಮಿಸಿದರು. ಇಬ್ಬರು ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದರು. ಅಭಿಮಾನಿಗಳು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರನ್ನೂ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿದ್ದರು, ಆದರೆ ಶೆಟ್ಟಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ, ಕೆಎಲ್ ರಾಹುಲ್ ವಿಶೇಷ ಸದಸ್ಯರಂತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಸಲ್ಮಾನ್ ಖಾನ್ ನಿರ್ಮಾಣದ ಹೀರೋ ಚಿತ್ರದಲ್ಲಿ ಆದಿತ್ಯ ಪಾಂಚೋಲಿ ಅವರ ಮಗ ಸೂರಜ್ ಜೊತೆಯಲ್ಲಿ ಅತಿಯಾ ಶೆಟ್ಟಿ ನಟಿಯಾಗಿ ಪಾದಾರ್ಪಣೆ ಮಾಡಿದರು. ಇದರ ನಂತರ, ಅವರು ಅರ್ಜುನ್ ಕಪೂರ್ ಎದುರು ಮುಬಾರಕನ್ ಚಿತ್ರದಲ್ಲಿ ಕಾಣಿಸಿಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com