ನಟ ದಿಲೀಪ್ ಕುಮಾರ್
ಬಾಲಿವುಡ್
ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ನಟ ದಿಲೀಪ್ ಕುಮಾರ್ ಅಂತ್ಯ ಸಂಸ್ಕಾರ
ಬಾಲಿವುಡ್ ದಂತಕಥೆ, ಹಿರಿಯ ನಟ ದಿಲೀಪ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿಸಲಾಯಿತು.
ಮುಂಬೈ: ಬಾಲಿವುಡ್ ದಂತಕಥೆ, ಹಿರಿಯ ನಟ ದಿಲೀಪ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿಸಲಾಯಿತು.
ಪತ್ನಿ ಸೈರಾ ಬಾನು ಸೇರಿದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಸಂಜೆ 4-45ರ ಸುಮಾರಿನಲ್ಲಿ ದಿಲೀಪ್ ಕುಮಾರ್ ಅವರ ಅಂತ್ಯ ಕ್ರಿಯೆ ನೆರವೇರಿತು. 98 ವರ್ಷದ ದೀಲಿಪ್ ಕುಮಾರ್, ಅನೇಕ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.
ಪೊಲೀಸರು ಕುಶಾಲ ತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಿದರು. ಸಮಾಧಿ ಸ್ಥಳದಲ್ಲಿ 25 ರಿಂದ 30ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಅಂತ್ಯಸಂಸ್ಕಾರಕ್ಕೂ ಮುನ್ನ ಮೆಗಾಸ್ಟಾರ್ ಅಭಿಷೇಕ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತಿತರರು ದಿಲೀಪ್ ಕುಮಾರ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ದಿಲೀಪ್ ನಿವಾಸದ ಬಳಿ ಹೆಚ್ಚಿನ ಜನರು ಸೇರದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.

