'ರಾಜ್ ಕುಂದ್ರಾ ಕಾಮದಾಹಕ್ಕೆ ಹೆದರಿ ಟಾಯ್ಲೆಟ್ ನಲ್ಲಿ ಅಡಗಿ ಕುಳಿತಿದ್ದೆ': ನಟಿ ಶೆರ್ಲಿನ್ ಚೋಪ್ರಾ

ಅಶ್ಲೀಲ ಚಿತ್ರ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮತ್ತೋರ್ವ ನಟಿ ಗಂಭೀರ ಆರೋಪ ಮಾಡಿದ್ದು, ರಾಜ್ ಕುಂದ್ರಾ ತಮ್ಮ ಮೇಲೂ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.
ನಟಿ ಶೆರ್ಲಿನ್ ಚೋಪ್ರಾ ಮತ್ತು ರಾಜ್ ಕುಂದ್ರಾ
ನಟಿ ಶೆರ್ಲಿನ್ ಚೋಪ್ರಾ ಮತ್ತು ರಾಜ್ ಕುಂದ್ರಾ
Updated on

ಮುಂಬೈ: ಅಶ್ಲೀಲ ಚಿತ್ರ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮತ್ತೋರ್ವ ನಟಿ ಗಂಭೀರ ಆರೋಪ ಮಾಡಿದ್ದು, ರಾಜ್ ಕುಂದ್ರಾ ತಮ್ಮ ಮೇಲೂ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.

ಮೂಲಗಳ ಪ್ರಕಾರ ಕಳೆದ ಏಪ್ರಿಲ್​ನಲ್ಲಿಯೇ ರಾಜ್​ ಕುಂದ್ರಾ ವಿರುದ್ಧ ಶೆರ್ಲಿನ್​ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್​ ಕುಂದ್ರಾ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದ್ದು, ಪ್ರಮುಖವಾಗಿ ತಮ್ಮ ಮೇಲೆ ರಾಜ್ ಕುಂದ್ರಾ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

'2019ರ ಆರಂಭದಲ್ಲಿಯೇ ಒಂದು ಆ್ಯಪ್​ ಬ್ಯುಸಿನೆಸ್​ಗಾಗಿ ರಾಜ್​ ಕುಂದ್ರಾ ಅವರು ನನ್ನನ್ನು ಕರೆದಿದ್ದರು. ಮೀಟಿಂಗ್​ ಮುಗಿದ ಬಳಿಕ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು. ನಾನು ಬೇಡ ಎಂದು ವಿರೋಧಿಸಿದರೂ ಕೂಡ ರಾಜ್​ ಕುಂದ್ರಾ ಬಲವಂತವಾಗಿ ಕಿಸ್​ ಮಾಡಲು ಬಂದರು. ನನಗೆ ಭಯವಾಯಿತು. ಇದನ್ನೆಲ್ಲ ನಿಲ್ಲಿಸುವಂತೆ ಕೇಳಿಕೊಂಡೆ. ನಂತರ ಅವರನ್ನು ತಳ್ಳಿ ಓಡಿ ಹೋದೆ. ಶೌಚಾಲಯಕ್ಕೆ ತೆರಳಿ ಅಡಗಿಕೊಂಡೆ ಎಂದು ದೂರಿನಲ್ಲಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ ಎನ್ನಲಾಗಿದೆ.

ಶೆಲ್ಪಾ ಶೆಟ್ಟಿ ಜೊತೆಗಿನ ಸಂಬಂಧ ಸರಿ ಇಲ್ಲ ಎಂದು ಹೇಳಿಕೊಂಡಿದ್ದರಂತೆ ರಾಜ್ ಕುಂದ್ರಾ
ಇದೇ ವೇಳೆ ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿ ಇರುತ್ತೇನೆ ಎಂದು ಶರ್ಲಿನ್​​ ಬಳಿ ರಾಜ್​ ಕುಂದ್ರಾ ಹೇಳಿಕೊಂಡಿದ್ದರು ಎಂಬ ಸುದ್ದಿ ಈಗ ಬಹಿರಂಗ ಆಗಿದೆ. 

ಬಂಧನ ಭೀತಿಯಲ್ಲಿ ಶೆರ್ಲಿನ್, ನಿರೀಕ್ಷಣಾ ಜಾಮೀನಿಗೆ ಅರ್ಜಿ
ಇನ್ನು ಇದೇ ಪ್ರಕರಣದಲ್ಲಿ ರಾಜ್ ಕುಂದ್ರಾ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಶೆರ್ಲಿನ್​ ಚೋಪ್ರಾ ಅವರಿಗೂ ಬಂಧನದ ಭಯ ಕಾಡುತ್ತಿದೆ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ರಾಜ್​ ಕುಂದ್ರಾ ಅವರ ಬಗ್ಗೆ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವೇ ಎಂದು ಶೆರ್ಲಿನ್​ ಚೋಪ್ರಾ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಆಯಾಮಗಳಿಂದ ತನಿಖೆ ಮುಂದುವರಿದಿದ್ದು, ಅನೇಕ ನಟಿಯರ ಹೆಸರುಗಳು ಹೊರಬರುತ್ತಿವೆ. ಶಿಲ್ಪಾ ಶೆಟ್ಟಿಗೆ ಪೊಲೀಸರು ಇನ್ನೂ ಕ್ಲೀನ್ ಚಿಟ್ ಕೊಟ್ಟಿಲ್ಲ ಎನ್ನಲಾಗಿದೆ.

ಪ್ರಸ್ತುತ ರಾಜ್ ಕುಂದ್ರಾ ಅವರನ್ನು ಮುಂಬೈ ಕೋರ್ಟ್ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com