ಮುಗಿಯದ ಖಾನ್‌ಗಳ ಜಂಜಾಟ: ಕಮಾಲ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕಾಗಿ ಸಲ್ಮಾನ್ ಖಾನ್ ಅರ್ಜಿ
ಮುಂಬೈ: ನಟ ಕಮಲ್ ಆರ್ ಖಾನ್ ಅವಹೇಳನಕಾರಿ ಹೇಳಿಕೆ ಮುಂದುವರೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಕ್ಕಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಮಲ್ ಆರ್ ಖಾನ್ ಅವರನ್ನು ನೇರವಾಗಿ ಅಥವಾ ಪರೋಕ್ಷವಾಗಿ ನನ್ನ ಮುಂದಿನ ಯೋಜನೆಗಳ ಕುರಿತು ವಿಡಿಯೋ ಮಾಡುವುದನ್ನು ತಡೆಯುವಂತೆ ಕೋರಿ ಕಳೆದ ತಿಂಗಳು ಮಾನಹಾನಿ ಮೊಕದ್ದಮೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ ಕಮಲ್ ಆರ್ ಖಾನ್ ಪರ ವಕೀಲ ಮನೋಜ್ ಗಡ್ಕರಿ ನ್ಯಾಯಾಲಯಕ್ಕೆ ಮುಂದಿನ ದಿನಾಂಕದ ವಿಚಾರಣೆಯ ತನಕ ಸಲ್ಮಾನ್ ವಿರುದ್ಧ ತಮ್ಮ ಅರ್ಜಿದಾರ ಯಾವುದೇ ಮಾನಹಾನಿಕರ ಪೋಸ್ಟ್ ಅಥವಾ ಟೀಕೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದರು.
ಕಳೆದ ತಿಂಗಳು ಒಟಿಟಿಯಲ್ಲಿ ಬಿಡುಗಡೆಯಾಗಿದ್ದ 'ರಾಧೆ' ಚಿತ್ರದ ವಿಮರ್ಶೆ ಕುರಿತು ಕಮಲ್ ಆರ್ ಖಾನ್ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಸಲ್ಮಾನ್ ಪರ ವಕೀಲ ಪ್ರದೀಪ್ ಘಾಂಡಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿವಿ ಮರಾಠೆಗೆ ಭರವಸೆ ನೀಡಿದರೂ ಕಮಲ್ ಆರ್ ಖಾನ್ ಮಾನಹಾನಿಕರ ಟ್ವೀಟ್‌ಗಳನ್ನು ಪ್ರಕಟಿಸುವುದನ್ನು ಮುಂದುವರೆಸಿದ್ದಾರೆ. ಇದು ನ್ಯಾಯಾಲಯದ ನಿಂದನೆ ಎಂದು ಘಾಂಡಿ ವಾದಿಸಿದರು.
ಕಮಲ್ ಆರ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಸಂಬಂಧ ಕ್ರಮ ಕೋರಿ ಅರ್ಜಿ ಸಲ್ಲಿಸಲಾಯಿತು. ಲಅರ್ಜಿಯ ಕುರಿತು ವಾದಗಳನ್ನು ಆಲಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಖಾನ್ ಪರ ವಕೀಲ ಮನೋಜ್ ಗಡ್ಕರಿ ನೀಡಿದ ಹೇಳಿಕೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ