ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ ಅಮಿತಾಭ್ ಬಚ್ಚನ್ ನೀಡಿರುವ ದೇಣಿಗೆ ಎಷ್ಟು ಗೊತ್ತಾ?

 ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಹಾರ ಕಾರ್ಯಕ್ಕಾಗಿ ಈವರೆಗೂ ಸುಮಾರು 15 ಕೋಟಿ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್., ಅಗತ್ಯಬಿದ್ದರೆ ತನ್ನ ವೈಯಕಿಕ್ತ ನಿಧಿಯಿಂದ ಮತ್ತಷ್ಟು ಹಣ ನೀಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್

ಮುಂಬೈ: ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಹಾರ ಕಾರ್ಯಕ್ಕಾಗಿ ಈವರೆಗೂ ಸುಮಾರು 15 ಕೋಟಿ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್., ಅಗತ್ಯಬಿದ್ದರೆ ತನ್ನ ವೈಯಕಿಕ್ತ ನಿಧಿಯಿಂದ ಮತ್ತಷ್ಟು ಹಣ ನೀಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.

ದೇಶದಲ್ಲಿ ಆರೋಗ್ಯ ಬಿಕ್ಕಟ್ಟು ಉಲ್ಬಣಿಸಿದ್ದರೂ ಸೆಲೆಬ್ರೆಟಿಗಳು ಜನರಿಗೆ ಸಹಾಯ ಮಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಫೋಸ್ಟ್ ಗಳಿಗೆ ಪ್ರತಿಕ್ರಿಯಿಸಿರುವ ಅಮಿತಾಭ್, ಸಾಂಕ್ರಾಮಿಕ ಸಂದರ್ಭದಲ್ಲಿ ತಾವು ನೀಡಿರುವ ನೆರವಿನ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.

ನವದೆಹಲಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಗುರುದ್ವಾರ ರಕಾಬ್ ಗಂಜಿ ಸಾಹಿಬ್ ನ ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಆರೈಕೆ ಕೇಂದ್ರಕ್ಕೆ   ಅಮಿತಾಭ್ ಬಚ್ಚನ್ 2 ಕೋಟಿ ದೇಣಿಗೆ ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿದರ್ ಸಿಂಗ್ ಸಿರ್ಸಾ  ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದರು.

ಈ ವೈರಸ್ ವಿರುದ್ಧದ ಹೋರಾಟಕ್ಕಾಗಿ ಅನೇಕ ಜನರು ದೇಣಿಕೆ ನೀಡಿದ್ದು, ದೆಹಲಿಯ ಕೇರ್ ಸೆಂಟರ್ ಗೆ 2 ಕೋಟಿಯನ್ನು ನೀಡಿದ್ದೇನೆ
ಆದರೆ, ದಿನ ಕಳೆದಂತೆ ಇದು 15 ಕೋಟಿ ರೂ. ಗೂ ಮೀರಿದೆ. ನನ್ನ ಸಂಪಾದನೆಯ ಹಣವನ್ನು ಅಗತ್ಯವಿರುವವರಿಗೆ ವಿನಿಯೋಗಿಸುತ್ತೇನೆ. ದೇವರ ದಯೆಯಿಂದ ಇಷ್ಟು ಹಣ ನೀಡಲು ಸಾಧ್ಯವಾಯಿತು ಎಂದು ಅವರು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com