ಅವಳಿ ಮಕ್ಕಳ ತಾಯಿಯಾದ ನಟಿ ಪ್ರೀತಿ ಜಿಂಟಾ

ಖ್ಯಾತ ಬಾಲಿವುಡ್ ನಟಿ, ಒಂದು ಕಾಲದ ಸ್ಟಾರ್ ಹೀರೋಯಿನ್ ಪ್ರೀತಿ ಜಿಂಟಾ (46) ಸಂತಸ ಸುದ್ದಿ ಹಂಚಿಕೊಂಡಿದ್ದಾರೆ. ಅವಳಿ ಶಿಶುಗಳಿಗೆ ತಾಯಿಯಾಗಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರೀತಿ ಜಿಂಟಾ
ಪ್ರೀತಿ ಜಿಂಟಾ
Updated on

ಮುಂಬೈ: ಖ್ಯಾತ ಬಾಲಿವುಡ್ ನಟಿ, ಒಂದು ಕಾಲದ ಸ್ಟಾರ್ ಹೀರೋಯಿನ್ ಪ್ರೀತಿ ಜಿಂಟಾ (46) ಸಂತಸ ಸುದ್ದಿ ಹಂಚಿಕೊಂಡಿದ್ದಾರೆ. ಅವಳಿ ಶಿಶುಗಳಿಗೆ ತಾಯಿಯಾಗಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಡಿಗೆ ತಾಯ್ತನ (ಸರೊಗಸಿ)ವಿಧಾನದಲ್ಲಿ ತಾನು, ಜಿನ್‌ ತಂದೆ ತಾಯಿಯಾಗಿದ್ದೇವೆ ಎಂದು ಹೇಳಿದ್ದಾರೆ. ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸುವ ಮೂಲಕ ಮಕ್ಕಳ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.

ಪತಿ ಜೀನ್ ಜೊತೆಗಿನ ತಮ್ಮ ಫೋಟೋ ದೊಂದಿಗೆ ‘ಎಲ್ಲರಿಗೂ ನಮಸ್ಕಾರ. ಇಂದು ನಮ್ಮ ಜೀವನದಲ್ಲಿ ನಡೆದ ಅತ್ಯಂತ ಸಂತೋಷದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಜೀನ್, ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದೇವೆ.

ನಮ್ಮ ಹೃದಯಗಳು ಕೃತಜ್ಞತೆ, ಪ್ರೀತಿಯಿಂದ ತುಂಬಿಹೋಗಿವೆ. ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದೇವೆ "ಅವರ ಹೆಸರನ್ನು ಜೈ ಜಿಂಟಾ, ಗಿಯಾ ಜಿಂಟಾ ಎಂದು ನಾಮಕರಣಗೊಳಿಸಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ತನಗೆ ಸಹಾಯ ಮಾಡಿದ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ಪ್ರೀತಿ ಜಿಂಟಾ ಧನ್ಯವಾದ ಸಲ್ಲಿಸಿದ್ದಾರೆ. ಪ್ರೀತಿ ಜಿಂಟಾ 2016 ರಲ್ಲಿ ಅಮೆರಿಕಾದ ಜೀನ್ ಗುಡೆನೆಫ್‌ ಅವರನ್ನು ವಿವಾಹವಾಗಿದ್ದರು. ಮದುವೆಗೂ ಮುನ್ನ ಜೀನ್ ಜೊತೆ ಸಂಬಂಧ ಹೊಂದಿದ್ದರು. 2016ರ ಫೆಬ್ರವರಿ 29ರಂದು ರಹಸ್ಯವಾಗಿ ಮದುವೆಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com