ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್

ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ), ಗ್ರೂಪಿಸಂ ಹಾವಳಿ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇರುವುದು ವರ್ಣಭೇದ ಎಂದು ಬಾಲಿವುಡ್ ನ ಬಂಡುಕೋರ ಎಂದೇ ಹೆಸರಾದ ನವಾಜುದ್ದೀನ್ ಬಾಂಬ್ ಸಿಡಿಸಿದ್ದಾರೆ.
ನಟ ನವಾಜುದ್ದೀನ್ ಸಿದ್ಧಿಕಿ,
ನಟ ನವಾಜುದ್ದೀನ್ ಸಿದ್ಧಿಕಿ,
Updated on

ಬಾಲಿವುಡ್ ನ ಬಂಡುಕೋರ ಎಂದೇ ಹೆಸರಾದ ನವಾಜುದ್ದೀನ್ ಸಿದ್ದಿಕಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್ ಕಾರ್ಯ ನಿರ್ವಹಿಸುತ್ತಿರುವ ಬಗೆಯನ್ನು ಮತ್ತೆ ಟೀಕಿಸಿದ್ದಾರೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ), ಗ್ರೂಪಿಸಂ ಹಾವಳಿ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇರುವುದು ವರ್ಣಭೇದ ಎಂದು ನವಾಜುದ್ದೀನ್ ಬಾಂಬ್ ಸಿಡಿಸಿದ್ದಾರೆ. 

ಬಾಲಿವುಡ್ ಮಂದಿ ಬಿಳಿ ತೊಗಲಿನ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಾನು ಬಹಳ ಹಿಂದಿನಿಂದಲೂ ಅದರ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ ಎನ್ನುವ ನವಾಜುದ್ದೀನ್ ಸಿದ್ದಿಕಿ ಈ ಕಾಲಘಟ್ಟದಲ್ಲೂ ಬಿಳಿ ತೊಗಲಿನ ಮೇಲಿನ ಅಂಧಾಭಿಮಾನ ಹೋಗದೇ ಇರುವುದಕ್ಕೆ ಬೇಸರಿಸಿದ್ದಾರೆ. 

ಕಪ್ಪು ಅಥವಾ ಕಂದು ತೊಗಲಿನ ಕಲಾವಿದರು ನಾಯಕ ಅಥವಾ ನಾಯಕಿಯರಾಗಿ ನಟಿಸುವ ದಿನಗಳು ಒಟಿಟಿ ಸೇವೆಯಿಂದಾಗಿ ಭಾರತದಲ್ಲಿ ಬರಲಿರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಲ್ಲಿ ಮುಖ್ಯವಾಗಿ ಕಂಟೆಟ್ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆಯೇ ವಿನಾ ಮಿಕ್ಕೆಲ್ಲಾ ಸಂಗತಿ ನಗಣ್ಯ ಎನ್ನುವುದು ಅವರ ಅಭಿಪ್ರಾಯ.

ನೆಟ್ ಫ್ಲಿಕ್ಸ್ ಮತ್ತಿತರ ಒಟಿಟಿ ಪ್ಲಾಟ್ ಫಾರ್ಮ್ ಗಳು ಬಂದ ನಂತರವೂ ಕಂಟೆಂಟ್ ವಿಷಯದಲ್ಲಿ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ವಂಚನೆ ಎಸಗಲಾಗುತ್ತಿದೆ ಎಂದು ನವಾಜ್ ಖೇದ ವ್ಯಕ್ತಪಡಿಸಿದ್ದಾರೆ. 

ಯಾವುದೋ ಒಂದು ಸಿನಿಮಾ ಬಾಕ್ಸಾಫೀಸಿನಲ್ಲಿ ಹಿಟ್ ಆದರೆ ಸಾಕು ಅದೇ ಮಾದರಿಯ ಹತ್ತು ಹಲವು ಸಿನಿಮಾಗಳು ಸರದಿ ಪ್ರಕಾರ ತೆರೆಗೆ ಅಪ್ಪಳಿಸುತ್ತವೆ. ಈ ಸಿನಿಮಾಗಳು ಬೇರೆ ಬೇರೆ ಎಂದು ತೋರಿದರೂ ಅವುಗಳ ಮೂಲ ಫಾರ್ಮ್ಯುಲ ಒಂದೇ  ಆಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com