The New Indian Express
ಮುಂಬೈ: ನಟಿ ತೆರೆ ಮೇಲೆ ರೊಮ್ಯಾನ್ಸ್ ಮಾಡುವ ನಟನ ಕಪಾಳಕ್ಕೆ ಯಾಕೆ ಹೊಡೆಯುತ್ತಾಳೆ ಎನ್ನುವುದಕ್ಕೆ ನೂರಾರು ಕಾರಣಗಳನ್ನು ಕೊಟ್ಟುಕೊಳ್ಳುವುದು ಸುಲಭ. ಆದರೆ ಅಕ್ಷಯ್ ಕುಮಾರ್ ಗೆ ಬಾಲಿವುಡ್ ನ ಹಾಟೆಸ್ಟ್ ಬೆಡಗಿ ಕತ್ರೀನಾ ಕೈಫ್ ಕಪಾಳಕ್ಕೆ ಹೊಡೆಯುವುದಕ್ಕೆ ಕಾರಣ ಬೇರೇನೂ ಅಲ್ಲ. ಸಿನಿಮಾ ಶೂಟಿಂಗ್.
ಇದನ್ನೂ ಓದಿ: ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ
ಅವರಿಬ್ಬರೂ ಸೂರ್ಯವಂಶಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅದೇ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅವರಿಬ್ಬರಿಗೂ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಇಬ್ಬರೂ ರೊಮ್ಯಾನ್ಸ್ ಮತ್ತು ಕಪಾಳಕ್ಕೆ ಹೊಡೆಯುವ ದೃಶ್ಯಗಳಲ್ಲಿ ನಟಿಸಿದ್ದೀರಿ. ಇವೆರಡರಲ್ಲಿ ಯಾವ ದೃಶ್ಯಕ್ಕೆ ರೀಟೇಕ್ ತೆಗೆದುಕೊಂಡಿದ್ದೀರಿ ಎನ್ನುವುದೇ ಆ ಪ್ರಶ್ನೆ.
ಇದನ್ನೂ ಓದಿ: ಓಹ್ ಮೈ ಗಾಡ್-2 ಗೆ ಚಿತ್ರೀಕರಣ ಪ್ರಾರಂಭಿಸಿದ ಅಕ್ಷಯ್ ಕುಮಾರ್
ಇಬ್ಬರೂ ಕಲಾವಿದರು ಜೊತೆಯಾಗಿ 6 ಕ್ಕೂ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದವರು. ಹೀಗಾಗಿ ರೊಮ್ಯಾನ್ಸ್ ಆಗಲಿ, ಕಪಾಳಕ್ಕೆ ಹೊಡೆಯುವ ದೃಶ್ಯವೇ ಆಗಲಿ ಯಾವುದಕ್ಕೂ ರೀಟೇಕ್ ಅವಶ್ಯಕತೆ ಬೀಳದು ಎಂದು ಕತ್ರೀನಾ ಹೇಳಿದರು. ಅವರಿಬ್ಬರ ನಡುವೆ ತೆರೆ ಮೇಲೆ ಹೊಂದಾಣಿಕೆ ತುಂಬಾ ಚೆನ್ನಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: 'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ನನ್ನ ಗಂಡ: ಕರೀನಾ ಕಪೂರ್
ಈ ಸಂದರ್ಭ ಅಕ್ಷಯ್ ಕುಮಾರ್ ಒಂದು ಘಟನೆ ಬಿಚ್ಚಿಟ್ಟಿದ್ದಾರೆ. ಕಪಾಳಕ್ಕೆ ಹೊಡೆಯುವ ದೃಶ್ಯದಲ್ಲಿ ಕ್ಯಾಮೆರಾ ಕ್ಲೋಸಪ್ ನಲ್ಲಿ ಇಡಲಾಗಿತ್ತು. ಹೀಗಾಗಿ ಕಪಾಳಕ್ಕೆ ಹೊಡೆಯುವಾಗ ಕತ್ರೀನಾ ಕೈ ನನ್ನ ಕೆನ್ನೆಗೆ ಟಚ್ ಆಗಿದೆಯೋ ಇಲ್ಲವೋ ಎನ್ನುವುದು ಕ್ಯಾಮೆರಾದಲ್ಲಿ ಚೆನ್ನಾಗಿ ಗೊತ್ತಾಗುತ್ತಿದ್ದಿತು. ಹೀಗಾಗಿ ಕತ್ರೀನಾ ಹೊಡೆದಂತೆ ನಟಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಕತ್ರೀನಾ ಈ ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಂಡು ನಿಜಕ್ಕೂ ಹೊಡೆದುಬಿಟ್ಟಿದ್ದಳು ಎಂದು ಅಕ್ಷಯ್ ಚಟಾಕಿ ಹಾರಿಸಿದ್ದಾರೆ.
ಇದನ್ನೂ ಓದಿ: ಆರ್ ಎಸ್ ಎಸ್ ಕುರಿತ ಹೇಳಿಕೆ: ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಎಫ್ ಐಆರ್