ಇನ್ಶೂರೆನ್ಸ್ ಹಣಕ್ಕಾಗಿ ತನ್ನ ಸಾವಿನ ನಾಟಕವಾಡಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ 'ಕುರುಪ್' ಸಿನಿಮಾ ಟ್ರೇಲರ್ ಬಿಡುಗಡೆ: ಮಿಂಚಿದ ದುಲ್ಖರ್ ಸಲ್ಮಾನ್

80ರ ದಶಕದಲ್ಲಿ ಇನ್ಶೂರೆನ್ಸ್ ಹಣಕ್ಕಾಗಿ ತನ್ನನ್ನೇ ಹೋಲುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಸಾವಿನ ನಾಟಕವನ್ನು ಸೃಷ್ಟಿಸಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಭೂಪ ಸುಕುಮಾರ ಕುರುಪ್.
ಕುರುಪ್ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್
ಕುರುಪ್ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್
Updated on

ಕೊಚ್ಚಿ: ಸುಕುಮಾರ ಕುರುಪ್ ಎಂಬ ವ್ಯಕ್ತಿ ಇಂದಿಗೂ ಕೇರಳ ರಾಜ್ಯದಲ್ಲಿ ದಂತಕಥೆ. 80ರ ದಶಕದಿಂದಲೂ ಆತ ಪೊಲಿಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದಾನೆ. ಮಲಯಾಳಿಗಳ ಬಾಯಲ್ಲಿ ಆತನ ಕಥೆಗಳು ನಾನಾ ರೀತಿಯಲ್ಲಿ ಇಂದಿಗೂ ಹರಿದಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಆತ ನಡೆಸಿದ ವಿಲಕ್ಷಣ ಅಪರಾಧ.

ಆತ ಒಬ್ಬ ಕೊಲೆಗಾರ. ಆದರೆ ಬರೀ ಅಷ್ಟೇ ಆಗಿದ್ದರೆ ಆತ ಯಾರ ನೆನಪಲ್ಲೂ ಉಳಿಯುತ್ತಿರಲಿಲ್ಲ. ದಂತಕಥೆಯೂ ಆಗುತ್ತಿರಲಿಲ್ಲ. ೮ ಲಕ್ಷ ರೂ. ಇನ್ಶೂರೆನ್ಸ್ ಹಣಕ್ಕಾಗಿ ತನ್ನನ್ನೇ ಹೋಲುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ತನ್ನ ಸಾವಿನ ನಾಟಕವನ್ನು ಸೃಷ್ಟಿಸಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಭೂಪ ಸುಕುಮಾರ ಕುರುಪ್. ಪೊಲೀಸರು ಇಂದಿಗೂ ಅವನನ್ನು ಹುಡುಕುತ್ತಿದ್ದಾರೆ.

ಅವನ ಜೀವನವನ್ನಾಧರಿಸಿದ ಸಿನಿಮಾ ದುಲ್ಖರ್ ಸಲ್ಮಾನ್ ಅಭಿನಯದ 'ಕುರುಪ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಶೋಭಿತಾ ಧುಲಿಪಾಲ, ಇಂದ್ರಜಿತ್ ಸುಕುಮಾರನ್, ಸನ್ನಿ ವೇಯ್ನ್ ಮತ್ತಿತರರು ನಟಿಸಿದ್ದಾರೆ. ಸಿನಿಮಾ ನವೆಂಬರ್ 12ರಂದು ಮಲಯಾಳಂ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com