'ಇಂಟು ದ ವೈಲ್ಡ್ ವಿತ್' ಕಾರ್ಯಕ್ರಮಕ್ಕೆ ಹಿಂದೂ ಮಹಾಸಾಗರದಲ್ಲಿ ನಟ ಅಜಯ್ ದೇವಗನ್ ರೋಚಕ ಚಿತ್ರೀಕರಣ
ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.
Published: 13th October 2021 02:29 PM | Last Updated: 15th October 2021 01:14 PM | A+A A-

ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್
ಮುಂಬೈ: ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.
ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ದಿ ವೈಲ್ಡ್ ವಿತ್ ಬಿಯರ್ ಗ್ರಿಲ್ ಕಾರ್ಯಕ್ರಮದ ಗ್ರಿಲ್ ಈ ಸರಣಿಯ ಮೊದಲ ಕಂತಿನಲ್ಲಿ ಕಾಣಿಸಿಕೊಂಡಿದ್ದು, ಅಪಾಯಕಾರಿ ಸಾಗರದಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದಾಗಿದೆ.
They say you will never know until you go and so I did! Exploring the uninhabited Islands of the Indian Ocean with @BearGrylls yeh koi khel nahi hai bro! Here are glimpses of our unforgettable journey of #IntoTheWild premiering 22nd Oct @discoveryplusIN & 25th Oct @DiscoveryIN pic.twitter.com/KF5saNhOVZ
— Ajay Devgn (@ajaydevgn) October 12, 2021
ಅಪಾಯಕಾರಿ ಸಾಹಸಗಳ ನಡುವೆ ಅಜಯ್‌ದೇವನ್ ಅವರೊಂದಿಗೆ ಗ್ರಿಲ್, ಅವರಕುಟುಂಬ, ವೃತ್ತಿ ಮತ್ತು ಜೀವನದ ಕುರಿತು ಮುಕ್ತ ಸಂಭಾಷಣೆ ನಡೆಸಲಿದ್ದಾರೆ. ಹಿಂದೂ ಮಹಾಸಾಗರದ ಅತ್ಯಂತ ನಿರ್ಜನ ದ್ವೀಪಗಳಲ್ಲಿ ಬದುಕಲು, ಪ್ರಯತ್ನಿಸುವ ಈ ಸಾಹಸಮಯ ಸರಣಿ ಮೈನವಿರೇಳಿಸುವುದರಲ್ಲಿ ಅನುಮಾನವಿಲ್ಲ. ಈ ಚಿತ್ರೀಕರಣದ ಅನುಭವ ಹಂಚಿಕೊಮಡಿರುವ ಅಜಯ್ ದೇವಗನ್, "ಕಾಡಿನಲ್ಲಿ ನನ್ನ ಮೊದಲ ಪಯಣ ಮತ್ತು ಇದು ಮಕ್ಕಳಾಟವಲ್ಲ ಎಂದು ಹೇಳಬಲ್ಲೆ' ಎಂದಿದ್ದಾರೆ.
ನನ್ನ ತಂದೆ ಸಾಹಸ ನಿರ್ದೇಶಕರಾಗಿದ್ದರು ಮತ್ತು ಭಾರತೀಯ ಚಿತ್ರರಂಗದಲ್ಲಿ ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅಪಾಯಕಾರಿ ಪಾತ್ರಗಳನ್ನು ಒಳಗೊಂಡಂತೆ ಹಲವಾರು ಪಾತ್ರಗಳನ್ನುನಿರ್ವಹಿಸಿದ್ದೇನೆ. ಅಂತಹದೇ ಅನುಭವ ಇದಾಗಿತ್ತು. ಇದು ಪ್ರಕೃತಿಯೊಂದಿಗೆ ಅಗತ್ಯ ಸಂಬಂಧ ಕಂಡುಕೊಳ್ಳಲು ನೆರವಾಯಿತು ಎಂದರು.
ಈ ಇನ್ ಟೂ ದಿ ವೈಲ್ಡ್ ಕಾರ್ಯಕ್ರಮ ಡಿಸ್ಕವರಿ+, ಡಿಸ್ಕವರಿ ಮತ್ತು ಡಿಸ್ಕವರಿ ಎಚ್‌ಡಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲಯಾಳಂ ಮತ್ತು ಕನ್ನಡ ಸೇರಿದಂತೆ 7ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಸಂಚಿಕೆ ಅ 22ರಂದು ಪ್ರಸಾರವಾಗಲಿದೆ.