ಮುಂಬೈ: ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಜಾಮೀನು ಪಡೆದು ಉದ್ಯಮಿ ರಾಜ್ ಕುಂದ್ರಾ ಮುಂಬೈ ಜೈಲಿನಿಂದ ಬಂದಿದ್ದು ಇದರ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಪತಿಯ ಬಿಡುಗಡೆ ಕುರಿತಂತೆ ಚೀನಾದ ತತ್ವಜ್ಞಾನಿಯ ಸೂಕ್ತಿಯೊಂದನ್ನು ಉಲ್ಲೇಖಿಸಿ ಪೋಸ್ಟ್ ಹಾಕಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಶ್ರೇಷ್ಠ ವೈಭವವು ಎಂದಿಗೂ ಬೀಳುವುದಲ್ಲ, ಆದರೆ ನಾವು ಬೀಳುವಾಗಲೆಲ್ಲಾ ಏಳುತ್ತೇವೆ ಎಂದು ಶಿಲ್ಪಾ ಶೆಟ್ಟಿ ಚೀನಾದ ತತ್ವಜ್ಞಾನಿ ಕನ್ಫ್ಯೂಷಿಯಸ್‌ರ ಉಲ್ಲೇಖದೊಂದಿಗೆ ತನ್ನ ಚಿತ್ರವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
46 ವರ್ಷದ ಶಿಲ್ಪಾ ಶೆಟ್ಟಿ, ಯಾವಾಗಲೂ ನಿಮ್ಮನ್ನು ನೆಲಕ್ಕೆ ತಳ್ಳುವ ಕ್ಷಣಗಳು ಬರುತ್ತವೆ. ಇಂತಹ ಸಮಯದಲ್ಲಿ, ಏಳು ಬಾರಿ ಬಿದ್ದರೂ ನಾವು ಸಮರ್ಥರನ್ನಾಗಿ ಮಾಡಿಕೊಂಡು ಎಂಟನೆ ಬಾರಿಗೆ ನಿಜವಾಗಿಯೂ ಎದ್ದು ನಿಲ್ಲುತ್ತೇವೆ ಎಂದು ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಷ್ಟದ ಕ್ಷಣಗಳಲ್ಲಿ ಚೇತರಿಸಿಕೊಳ್ಳಲು ಧೈರ್ಯ, ಇಚ್ಛಾಶಕ್ತಿ ಮತ್ತು ಶಕ್ತಿ ಬೇಕು ಎಂದು ಶೆಟ್ಟಿ ಹೇಳಿದರು.
46 ವರ್ಷದ ಕುಂದ್ರಾ ಬೆಳಿಗ್ಗೆ 11.30ರ ಸುಮಾರಿಗೆ ಆರ್ಥರ್ ರಸ್ತೆ ಜೈಲಿನಿಂದ ಬಿಡುಗಡೆಗೊಂಡರು ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
50,000 ರೂ.ಗಳ ಬಾಂಡ್ ಹಿನ್ನಲೆಯಲ್ಲಿ 2021ರ ಸೆಪ್ಟೆಂಬರ್ 20ರ ಸೋಮವಾರ ಕುಂದ್ರಾಗೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಬಿ ಭಾಜಿಪಾಲೆ ಜಾಮೀನು ನೀಡಿದರು.
ಪ್ರಕರಣ ಸಂಬಂಧ ಕಳೆದ ಎರಡು ತಿಂಗಳಿನಿಂದ ಜೈಲಿನಲ್ಲಿದ್ದ ರಾಜ್ ಕುಂದ್ರಾ ಇಂದು ಬೆಳಗ್ಗೆ ಬಿಡುಗಡೆಯಾಗಿದ್ದರು.
Advertisement