ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲೆ ಆಸಕ್ತಿ ಕಳೆದುಕೊಂಡೆ: ಕರೀನಾ ಕಪೂರ್ ಖಾನ್
ಮುಂಬೈ: ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿದ್ದ ನಟಿ ಕರೀನಾ ಕಪೂರ್ ಖಾನ್ ಸಂದರ್ಶನವೊಂದರಲ್ಲಿ ತಾವು ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.
ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯ ಪರಿಸ್ಥಿತಿ ಬಹುತೇಕ ಮಂದಿಗೆ ಅರ್ಥ ಆಗುವುದೇ ಇಲ್ಲ. ಆಕೆಯ ತಳಮಳ, ಭಾವನೆಗಳು, ಮಾನಸಿಕ ಉದ್ವೇಗ, ಮೂಡ್ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಇರುತ್ತವೆ. ಇಂಥಾ ಸಂದರ್ಭದಲ್ಲಿ ಆಕೆಯ ಜೊತೆ ಇರುವ ಪತಿ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ ಕರೀನಾ, ತಮ್ಮ ಪತಿ ಸೈಫ್ ಅಲಿ ಖಾನ್ ತುಂಬಾ ಚೆನ್ನಾಗಿ ಹೊಂದಿಕೊಂಡರು ಎಂದು ಸೈಫ್ ಬಗ್ಗೆ ಮೆಚ್ಚುಗೆ ಮಾತನ್ನಾಡಿದ್ದಾರೆ.
ದೈನಂದಿನ ಬದುಕಿನಲ್ಲಿ ದಂಪತಿ ನಡುವೆ ಸೆಕ್ಸ್ ಬಾಂಧವ್ಯದ ಕೊಂಡಿಯಾಗಿ ಬೆಸೆಯುತ್ತದೆ ನಿಜ. ಆದರೆ ಅದು ಇಬ್ಬರೂ ಸಂಗಾತಿಗಲ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಯಾರೇ ಒಬ್ಬ ಸಂಗಾತಿಗೆ ಆ ಕ್ಷಣದಲ್ಲಿ ಸೆಕ್ಸ್ ಮಾಡಲು ಆಸಕ್ತಿ ಇಲ್ಲದೇ ಹೋದಲ್ಲಿ ಮತ್ತೊಬ್ಬರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ದಾಂಪತ್ಯ ಅರ್ಥ ಪೂರ್ಣ ಎಂದು ಕರೀನ ಅಭಿಪ್ರಾಯ ಪಟ್ಟಿದ್ದಾರೆ.
ಬಾಣಂತನ ಕುರಿತಾಗಿ ತಾವು ಬರೆದ 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕದ ಪ್ರಚಾರ ಸಂದರ್ಭ ಅವರು ಮಾತನಾಡುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ