ಸೈಫ್ ಅಲಿ ಖಾನ್- ಕರೀನಾ ಕಪೂರ್ ದಂಪತಿಯ ಎರಡನೇ ಮಗನ ಹೆಸರು 'ಜೆಹ್' ಅಲ್ಲ ಜೆಹಂಗೀರ್!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್ ದಂಪತಿಯ ಮೊದಲ ಪುತ್ರನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದರು.
ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್
ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್ ದಂಪತಿಯ ಮೊದಲ ಪುತ್ರನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದರು. ಇದೀಗ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಯ ಎರಡನೇ ಪುತ್ರನ ಹೆಸರು ಬಹಿರಂಗವಾಗಿದೆ.

ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್ ದಂಪತಿಯ ಎರಡನೇ ಪುತ್ರನ ಹೆಸರು 'ಜೆಹ್' ಎಂದು ಕರೀನಾ ಕಪೂರ್ ಖಾನ್ ತಂದೆ ರಣಧೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದ್ರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್ ದಂಪತಿಯ ದ್ವಿತೀಯ ಪುತ್ರನ ಹೆಸರು 'ಜೆಹಾಂಗೀರ್'!

ತಮ್ಮ ಪುತ್ರನಿಗೆ 'ಜೆಹಾಂಗೀರ್' ಎಂದು ಹೆಸರಿಟ್ಟಿರುವ ಬಗ್ಗೆ ಸೈಫ್ ಅಲಿ ಖಾನ್ ಆಗಲಿ ಕರೀನಾ ಕಪೂರ್ ಖಾನ್ ಆಗಲಿ ತಿಳಿಸಿಲ್ಲ. ಆದರೆ, ಕರೀನಾ ಕಪೂರ್ ಖಾನ್ ಬರೆದಿರುವ ಪ್ರೆಗ್ನೆನ್ಸಿ ಬೈಬಲ್' ಪುಸ್ತಕದಲ್ಲಿ ಪುತ್ರನ ಹೆಸರು 'ಜೆಹಾಂಗೀರ್' ಅಂತ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com