ಸಾಮಾಜಿಕ ಮಾಧ್ಯಮಗಳಲ್ಲಿ ಪತಿ ಹೆಸರು ತೆಗೆದು ಹಾಕಿದ್ದ ಪ್ರಿಯಾಂಕಾ ಚೋಪ್ರಾ: ಸಣ್ಣ ವಿಚಾರ ದೊಡ್ಡದಾಗಿದ್ದೇಕೆ ಎಂದು ಸ್ಪಷ್ಟನೆ!
ಭಾರತದ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ವಸ್ತ್ರ ವಿನ್ಯಾಸ, ನಟನೆ, ಸ್ಟೈಲ್, ವ್ಯಕ್ತಿತ್ವ ಹೀಗೆ ಹಲವಾರು ಕಾರಣಗಳಲ್ಲಿ ಸುದ್ದಿಯಲ್ಲಿರುತ್ತಾರೆ.
Published: 22nd December 2021 02:29 PM | Last Updated: 22nd December 2021 02:59 PM | A+A A-

ಪ್ರಿಯಾಂಕಾ ಚೋಪ್ರಾ
ಮುಂಬೈ: ಭಾರತದ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ವಸ್ತ್ರ ವಿನ್ಯಾಸ, ನಟನೆ, ಸ್ಟೈಲ್, ವ್ಯಕ್ತಿತ್ವ ಹೀಗೆ ಹಲವಾರು ಕಾರಣಗಳಲ್ಲಿ ಸುದ್ದಿಯಲ್ಲಿರುತ್ತಾರೆ.
ಬಾಲಿವುಡ್ ಹಾಲಿವುಡ್‍ನಲ್ಲಿ ಮಿಂಚುತ್ತಿರುವ ಪಿಗ್ಗಿಗೆ ಅಭಿಮಾನಿಗಳ ಸಾಗರವೇ ಇದೆ. ಇವರಲ್ಲಿ ಕೊಂಚ ವ್ಯತ್ಯಾಸವಾದರೂ ಅಭಿಮಾನಿಗಳಿಗೆ ತಿಳಿದು ಬಿಡುತ್ತದೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಪತಿಯ ಹೆಸರನ್ನು ತಮ್ಮ ಇನ್ ಸ್ಟಾಗ್ರಾಂನಿಂದ ಕೈಬಿಟ್ಟಿದ್ದಾರೆಯೇ ಹೊರತು ಬದುಕಿನಿಂದಲ್ಲ: ಆಪ್ತರ ಸ್ಪಷ್ಟನೆ
ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಪತಿ ಜೋನಸ್ ಹೆಸರನ್ನು ಕೈಬಿಟ್ಟಿದ್ದರು. ಇದರಿಂದ ಇವರಿಬ್ಬರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆಯೇ? ಇವರಿಬ್ಬರು ದೂರವಾಗುತ್ತಿದ್ದಾರೆಯೇ ಎಂಬಷ್ಟರ ಪಟ್ಟಿಗೆ ವದಂತಿಗಳು ಹರಿದಾಡುತ್ತಿದ್ದವು. ಪ್ರಿಯಾಂಕ ಚೋಪ್ರಾ ತಾಯಿ ಮಧು ಚೋಪ್ರಾ ವದಂತಿಗಳನ್ನು ತಳ್ಳಿಹಾಕಿದರು.
ಆದರೆ ಪಿಗ್ಗಿ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಟ್ವಿಟರ್ ಮತ್ತು ಇನ್‍ಸ್ಟಾಗ್ರಾಮ್ ಎರಡರಲ್ಲೂ ಒಂದೇ ಹೆಸರನ್ನು ಇರಿಸಿಕೊಳ್ಳಲು ಬಯಸಿದೆ. ಹಾಗಾಗಿ ಜೋನಾಸ್ ಹೆಸರನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದು ಹಾಕಿದೆ ಎಂದು ವಿವರಿಸಿದ್ದಾರೆ. ಸಣ್ಣ ವಿಚಾರಗಳು ಜನರಿಗೆ ಎಷ್ಟು ದೊಡ್ಡ ವಿಚಾರವಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ನಿಕ್ ಜೋನಸ್ ಪತ್ನಿ' ಎಂದು ಸಂಬೋಧಿಸಿದ ಮಾಧ್ಯಮದ ವಿರುದ್ಧ ಪ್ರಿಯಾಂಕಾ ಚೋಪ್ರಾ ತೀವ್ರ ಕಿಡಿ
ಪ್ರಿಯಾಂಕಾ ಅಭಿನಯದ ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್ ಚಿತ್ರ ಇಂದು ತೆರೆಗೆ ಬರುತ್ತಿದೆ. ಚಿತ್ರದಲ್ಲಿ, ಅವರು ಸತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಪ್ರಿಯಾಂಕಾ ತಾಯಿ ಮಧು ತಮ್ಮ ಮಗಳ ಬಗ್ಗೆ ಎಷ್ಟು ಹೆಮ್ಮೆಪಡುತ್ತಾರೆ ಎಂದರೆ ಪ್ರಿಯಾಂಕ ಎಲ್ಲಾ ಯಶಸ್ಸಿಗೆ ಅರ್ಹರು ಎಂದು ಹೇಳಿದರು.