ವಿಡಿಯೋ ಕಾಲ್‌ ನಲ್ಲಿ ನಗ್ನವಾಗಿ ಆಡಿಷನ್‌! ದಿಗ್ಬ್ರಮೆಗೊಂಡ ನಟಿ ಸಾಗರಿಕಾ ಮಾಡಿದ್ದೇನು?

ಬಾಲಿವುಡ್‌ ಪ್ರಸಿದ್ದ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವುದು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಸಾಗರಿಕಾ ಸೋನಾ-ರಾಜ್ ಕುಂದ್ರಾ
ಸಾಗರಿಕಾ ಸೋನಾ-ರಾಜ್ ಕುಂದ್ರಾ
Updated on

ಮುಂಬೈ: ಬಾಲಿವುಡ್‌ ಪ್ರಸಿದ್ದ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವುದು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಸಿನಿಮಾಗಳು, ವೆಬ್ ಸರಣಿಗಳಲ್ಲಿ ಅವಕಾಶ ನೀಡುವ ಹೆಸರಿನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿ, ಬಲವಂತದಿಂದ ಅಶ್ಲೀಲ ಸಿನಿಮಾಗಳನ್ನು ತೆಗೆದಿದ್ದಾನೆ ಎಂದು ಅವರ ವಿರುದ್ದ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ರೂಪದರ್ಶಿ, ನಟಿ ಸಾಗರಿಕಾ ಸೋನಾ ಸುಮನ್ ಅವರು ಈ ಹಿಂದೆ ನೀಡಿರುವ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿದೆ.

"ನಾನು ರೂಪದರ್ಶಿ, ಮೂರ್ನಾಲ್ಕು ವರ್ಷಗಳಿಂದ ಉದ್ಯಮದಲ್ಲಿದ್ದೇನೆ, ಆದರೆ ನನಗೆ ದೊಡ್ಡ ಅವಕಾಶಗಳು ಲಭಿಸಲಿಲ್ಲ. ಈ ಕ್ರಮವಾಗಿ ಲಾಕ್‌ಡೌನ್‌ನಲ್ಲಿ ನನಗೆ ಕೆಲವು ಕಹಿ ಅನುಭವಗಳಾಗಿವೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿರುವ ಆಕೆ, ಕಳೆದ ವರ್ಷ ಆಗಸ್ಟ್‌ ನಲ್ಲಿ ಉಮೇಶ್‌ ಕಾಮತ್‌ ಎಂಬ ವ್ಯಕ್ತಿಯಿಂದ ನನಗೆ ಕರೆ ಬಂತು. ರಾಜ್‌ ಕುಂದ್ರಾ ನಿರ್ಮಿಸುತ್ತಿರುವ ವೆಬ್ ಸರಣಿಯಲ್ಲಿ ಅವಕಾಶ ಕೊಡಿಸುವುದಾಗಿ ಆತ ಹೇಳಿದ್ದ, ಅಷ್ಟಕ್ಕೂ ರಾಜ್‌ ಕುಂದ್ರಾ ಯಾರೆಂದು ಕೇಳಿದರೆ ಆತ ಶಿಲ್ಪಾ ಶೆಟ್ಟಿಯ ಪತಿ ಎಂದು ಹೇಳಿದ್ದ ಎಂದು ತಿಳಿಸಿದ್ದಾರೆ.

"ಆ ವೆಬ್ ಸರಣಿಯಲ್ಲಿ ನಟಿಸಿದರೆ ಮುಂದೆ ಒಳ್ಳೆಯ ಅವಕಾಶಗಳು ಲಭಿಸಿ ಬಾಲಿವುಡ್‌ ನಲ್ಲಿ ಉತ್ತಮ ಅವಕಾಶಗಳು ಸಿಗಲಿವೆ ಎಂದು ಆತ ಹೇಳಿದ್ದರಿಂದ ನಾನು ಸರಿ ಎಂದು ಒಪ್ಪಿಕೊಂಡೆ. ಆದರೆ ಮೊದಲು ಆಡಿಷನ್ ಇರುತ್ತದೆ. ಕೋವಿಡ್‌ ಕಾಲವಾಗಿರುವ ಕಾರಣ ವಿಡಿಯೂ ಕಾಲ್‌ ಮೂಲಕ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದ. ನಾನು ವಿಡಿಯೋ ಕಾಲ್‌ ಮಾಡಿದ ನಂತರ ನಗ್ನವಾಗಿ ಆಡಿಷನ್‌ ನಲ್ಲಿ ಪಾಲ್ಗೊಳ್ಳುವಂತೆ ಹೇಳಿದ. ಆದರೆ ಅದು ನನ್ನಿಂದ ಅದು ಸಾಧ್ಯವಿಲ್ಲವೆಂದು ಹೇಳಿದ್ದೆ ಎಂದು ಆಕೆ ಹೇಳಿಕೊಂಡಿದ್ದಾರೆ.

"ವಿಡಿಯೋ ಕರೆಯಲ್ಲಿ ಮೂವರು ವ್ಯಕ್ತಿಗಳಿದ್ದರು. ಅವರಲ್ಲಿ ಒಬ್ಬರು ಮುಖ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದರು, ಆದರೆ, ಆತ ರಾಜ್‌ ಕುಂದ್ರಾ ಎಂದುಕೊಂಡೆ, ನಿಜವಾಗಿಯೂ ರಾಜ್‌ ಕುಂದ್ರಾ ಅವರು ಇಂತಹ ನೀಚ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಆತನನ್ನು ಅರೆಸ್ಟ್‌ ಮಾಡಿ ಈ ಜಾಲವನ್ನು ಬಯಲುಗೊಳಿಸಬೇಕು ಎಂದು ಮನವಿ ಮಾಡುವುದಾಗಿ ಸಾಗರಿಕಾ ಹೇಳಿದ್ದಾರೆ. ಆದರೆ, ರಾಜ್‌ ಕುಂದ್ರಾ ಕಚೇರಿಯಿಂದ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಹಿಂದಿನ ಸೂತ್ರಧಾರಿ ಉಮೇಶ್ ಕಾಮತ್ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಹಾಗೂ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com