ರೆಸಿಡೆನ್ಶಿಯಲ್ ಸೊಸೈಟಿ ನಿವಾಸಿಗಳಿಗೆ ಬೆದರಿಕೆ: ಬಾಲಿವುಡ್ ನಟಿ ಪಾಯಲ್ ರೋಹಟ್ಗಿ ಅರೆಸ್ಟ್

ಬಾಲಿವುಡ್ ನಟಿ ಪಾಯಲ್ ರೋಹಟ್ಗಿಯನ್ನು ಅಹಮದಾಬಾದ್ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ರೆಸಿಡೆನ್ಶಿಯಲ್ ಸೊಸೈಟಿಯ ನಿವಾಸಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ನಟಿಯ ಬಂಧನವಾಗಿದೆ.
ಪಾಯಲ್ ರೋಹಟ್ಗಿ
ಪಾಯಲ್ ರೋಹಟ್ಗಿ

ಬಾಲಿವುಡ್ ನಟಿ ಪಾಯಲ್ ರೋಹಟ್ಗಿಯನ್ನು ಅಹಮದಾಬಾದ್ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ರೆಸಿಡೆನ್ಶಿಯಲ್  ಸೊಸೈಟಿಯ ನಿವಾಸಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ನಟಿಯ ಬಂಧನವಾಗಿದೆ.

ಸೊಸೈಟಿ ಅಧ್ಯಕ್ಷ ಡಾ. ಪರಾಗ್ ಷಾ ಅವರು ನೀಡಿದ ದೂರಿನ ಆಧಾರದ ಮೇಲೆ ಗುರುವಾರ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸ್ಯಾಟಲೈಟ್  ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ ಎಸ್ ರಾಯ್ ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಸ್ಯಾಟಲೈಟ್ ಪ್ರದೇಶದಲ್ಲಿ ಐಷಾರಾಮಿ ಸೊಸೈಟಿಯಲ್ಲಿ  ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ 36 ವರ್ಷದ ನಟಿ  ಅವಾಚ್ಯ ಪದ ಬಳಕೆ ಮಾಡಿದ್ದಾರೆಂದು  ಎಫ್ಐಆರ್ ಅನ್ನು ಉಲ್ಲೇಖಿಸಿ ರಾಯ್ ಹೇಳಿದರು.

ತನ್ನ ದೂರಿನಲ್ಲಿ, ಪಾಯಲ್ ಕೆಲವು ಸಮಯದಿಂದ ಮಕ್ಕಳು ಸೇರಿದಂತೆ ಸೊಸೈಟಿಯ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಮತ್ತು ಒಮ್ಮೆ ಸೊಸೈಟಿಯ ಕಾಮನ್ ಪ್ಲೇಸ್ ನಲ್ಲಿ ಆಟ  ಆಡಿದರೆ "ಕಾಲು ಮುರಿಯುತ್ತೇನೆ" ಎಂದು ಮಕ್ಕಳಿಗೆ ಬೆದರಿಕೆ ಹಾಕಿದ್ದಳು. ಅವಳು ಸೊಸೈಟಿಯಲ್ಲಿ ಸ್ವಂತ ಮನೆ  ಹೊಂದಿಲ್ಲವಾದರೂ, ಜೂನ್ 20 ರಂದು ತನ್ನ ಹೆತ್ತವರೊಂದಿಗೆ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದಳು ಮತ್ತು ಆಕೆ ಸದಸ್ಯಳಲ್ಲ ಎಂದು ಸೂಚಿಸಿದರೂ ಹೊರಡಲು ನಿರಾಕರಿಸಿದಳು ಎಂದು ಷಾ ಆರೋಪಿಸಿದರು.

ಸಭೆಯಲ್ಲಿ ಪಾಯಲ್ ಸೊಸೈಟಿಯ ಸದಸ್ಯರನ್ನು ನಿಂದಿಸಿದ್ದಾಳೆ  ಮತ್ತು ಸೊಸೈಟಿಯ ವಾಟ್ಸಾಪ್ ಗ್ರೂಪ್‌ನಲ್ಲಿ ನಿಂದನೀಯ ಸಂದೇಶವನ್ನು ಪೋಸ್ಟ್ ಮಾಡಿದ್ದಾಳೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com