ಬಾಲಿವುಡ್ ನಟ ಬಿಕ್ರಮ್ ಜೀತ್ ಕೊರೊನಾಗೆ ಬಲಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರಿ ಭೀಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಮತ್ತೊಂದು ಕಡೆ ಸಿನಿಮಾ ರಂಗದಲ್ಲಿ ಸಂಭವಿಸುತ್ತಿರುವ ಸಾವಿನ ಸರಣಿಗೆ ತೀವ್ರ ಕಳವಳ ವ್ಯಕ್ತವಾಗಿದೆ. ಬಾಲಿವುಡ್ ಪ್ರಮುಖ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೊರೊನಾಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

Published: 01st May 2021 03:01 PM  |   Last Updated: 01st May 2021 03:01 PM   |  A+A-


ಬಿಕ್ರಮ್ ಜೀತ್

Posted By : Raghavendra Adiga
Source : UNI

ಮುಂಬೈ:  ದೇಶದಲ್ಲಿ ಕೊರೊನಾ ಎರಡನೇ ಅಲೆ ಭಾರಿ ಭೀಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಮತ್ತೊಂದು ಕಡೆ ಸಿನಿಮಾ ರಂಗದಲ್ಲಿ ಸಂಭವಿಸುತ್ತಿರುವ ಸಾವಿನ ಸರಣಿಗೆ ತೀವ್ರ ಕಳವಳ ವ್ಯಕ್ತವಾಗಿದೆ. ಬಾಲಿವುಡ್ ಪ್ರಮುಖ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೊರೊನಾಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

2003 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಗೊಂಡ ನಂತರ ಅವರು ಬಾಲಿವುಡ್‌ ಪ್ರವೇಶಿಸಿದರು. ಬಿಕ್ರಮ್‌ಜೀತ್ ಕನ್ವರ್‌ಪಾಲ್‌ ಹಲವು ಸಿನಿಮಾಗಳು, ಒಟಿಟಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಪೇಜ್‌ 3, 'ಅರಕ್ಷಣ್', 'ಪ್ರೇಮ್ ‌ರತನ್ ಧನ್ ಪಯೋ', 'ಜಬ್ ತಕ್ ಹೈ ಜಾನ್' ಹಾಗೂ '2 ಸ್ಟೇಟ್ಸ್' ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. 

ಅವರ ಕೊನೆಯ ಚಿತ್ರ ರಾಣಾ ದಗ್ಗುಬಾಟಿ ಹಾಗೂ ತಾಪ್ಸಿ ನಟಿಸಿದ 'ದಿ ಘಾಜಿ ಅಟ್ಯಾಕ್'. ಬಿಕ್ರಮ್‌ಜೀತ್ ಕನ್ವರ್‌ಪಾಲ್‌ ಇತ್ತೀಚಿಗೆ ಕೋವಿಡ್ -19 ಸಮಸ್ಯೆಯಿಂದ ಬಳಲುತ್ತಿದ್ದರು. ಬಾಲಿವುಡ್ ಗಣ್ಯರು ಕನ್ವರ್‌ಪಾಲ್‌ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. 


Stay up to date on all the latest ಬಾಲಿವುಡ್ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp