ಕೋವಿಡ್ ನಿಂದ ಆಪ್ತ ಕಾರ್ಯದರ್ಶಿ ನಿಧನ: ನಟಿ, ಸಂಸದೆ ಹೇಮಾಮಾಲಿನಿ ಭಾವುಕ ವಿದಾಯ

ಕೊರೋನಾದಿಂದಾಗಿ ತಮ್ಮ ಕಾರ್ಯದರ್ಶಿ ಮಾರ್ಕಂಡ್ ಮೆಹ್ತಾ ಮೃತಪಟ್ಟಿದ್ದಾರೆ ಎಂದು ಹಿರಿಯ ಬಾಲಿವುಡ್ ನಟಿ-ರಾಜಕಾರಣಿ ಹೇಮಾ ಮಾಲಿನಿ ತಿಳಿಸಿದ್ದಾರೆ.

Published: 10th May 2021 02:04 PM  |   Last Updated: 10th May 2021 02:04 PM   |  A+A-


Hema Malini with her secretary Markand Mehta

ಆಪ್ತ ಕಾರ್ಯದರ್ಶಿಯೊಂದಿಗೆ ಹೇಮಾ ಮಾಲಿನಿ

Posted By : Shilpa D
Source : Online Desk

ಮುಂಬೈ: ಕೊರೋನಾದಿಂದಾಗಿ ತಮ್ಮ ಕಾರ್ಯದರ್ಶಿ ಮಾರ್ಕಂಡ್ ಮೆಹ್ತಾ ಮೃತಪಟ್ಟಿದ್ದಾರೆ ಎಂದು ಹಿರಿಯ ಬಾಲಿವುಡ್ ನಟಿ-ರಾಜಕಾರಣಿ ಹೇಮಾ ಮಾಲಿನಿ ತಿಳಿಸಿದ್ದಾರೆ.

ಕುಟುಂಬದ ಸದಸ್ಯರಂತಿದ್ದ ಮೆಹ್ತಾ ಅವರನ್ನು ಕಳೆದುಕೊಂಡು ಅತೀವ ದುಃಖವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನಕಲಕುವ ಪೋಸ್ಟ್ ಹಾಕುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಭಾರವಾದ ಹೃದಯದಿಂದ ನಾನು ನನ್ನ ಸಹಚರ, ನನ್ನ ಕಾರ್ಯದರ್ಶಿ, ಕಠಿಣ ಪರಿಶ್ರಮಿ, ದಣಿವರಿಯದ ಮೆಹ್ತಾ ಜಿ ಅವರಿಗೆ ವಿದಾಯ ಹೇಳಿದೆ. ಅವರು ನನ್ನ ಕುಟುಂಬದ ಭಾಗವೆನ್ನುದಕ್ಕಿಂತ ಹೆಚ್ಚಾಗಿದ್ದರು. ಕೋವಿಡ್‌ನಿಂದಾಗಿ ನಾವು ಅವರನ್ನು ಕಳೆದುಕೊಂಡೆವು. ಅವರ ಜಾಗವನ್ನು ಯಾರೂ ತುಂಬಲಾರರು’ಎಂದು ಟ್ವಿಟರ್‌ನಲ್ಲಿ ಮೆಹ್ತಾ ಅವರ ಚಿತ್ರಗಳೊಂದಿಗೆ ಪೋಸ್ಟ್ ಮಾಡಿದ್ದಾರೆ.

80ರ ಹರೆಯದಲ್ಲಿದ್ದ ಮೆಹ್ತಾ ಅವರನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಮಾಮಾಲಿನಿ ಮಗಳು ನಟಿ ಇಶಾ ಡಿಯೋಲ್ ಹೇಳಿದ್ದಾರೆ. "ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ಅವರ ಸ್ಥಾನವನ್ನು ಯಾರೂ ತುಂಬಲಾಗದು ಇಶಾ ಡಿಯೋಲ್ ಬರೆದುಕೊಂಡಿದ್ದಾರೆ.


Stay up to date on all the latest ಬಾಲಿವುಡ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp