ಮಟನ್ ಶಾಪ್'ಗೆ ಸೋನು ಸೂದ್ ಹೆಸರು: ನಟ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

ಕೊರೋನಾ​ ಮೊದಲನೇ ಅಲೆ ಕಾಣಿಸಿಕೊಂಡಾಗ ಹಲವರಿಗೆ ಸಹಾಯ ಹಸ್ತ ಚಾಚಿದ್ದ ಸೋನು ಸೂದ್ ಅವರು ಈಗಲೂ ತಮ್ಮ ಮಾನವೀಯ ಕಾರ್ಯವನ್ನು ಮುಂದುವರೆಸಿದ್ದು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Published: 31st May 2021 02:11 PM  |   Last Updated: 31st May 2021 02:18 PM   |  A+A-


Sonu Sood

ಸೋನು ಸೂದ್

Posted By : Manjula VN
Source : Online Desk

ಮುಂಬೈ; ಕೊರೋನಾ​ ಮೊದಲನೇ ಅಲೆ ಕಾಣಿಸಿಕೊಂಡಾಗ ಹಲವರಿಗೆ ಸಹಾಯ ಹಸ್ತ ಚಾಚಿದ್ದ ಸೋನು ಸೂದ್ ಅವರು ಈಗಲೂ ತಮ್ಮ ಮಾನವೀಯ ಕಾರ್ಯವನ್ನು ಮುಂದುವರೆಸಿದ್ದು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಷ್ಟ ಎಂದವರಿಗೆ ಸಹಾಯ ಹಸ್ತ ಚಾಚುತ್ತಿರುವ ಸೋನು ಸೂದ್ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಹುಟ್ಟುಕೊಂಡಿವೆ. ಸಾಕಷ್ಟು ಅಂಗಡಿಗಳಿಗೆ ಸೋನು ಸೂದ್ ಅವರ​ ಹೆಸರಿಡಲಾಗುತ್ತಿದೆ. 

ಇದರಂತೆ ಮಟನ್​ ಅಂಗಡಿಗೂ ಸೋನು ಸೂದ್ ಅವರ ಹೆಸರಿಡಲಾಗಿದೆ. ತೆಲಂಗಾಣದಲ್ಲಿ ಮಟನ್‌ ಶಾಪ್‌ವೊಂದಕ್ಕೆ ಸೋನು ಸೂದ್‌ ಅವರ ಹೆಸರಿಡಲಾಗಿದೆ. ಇದಕ್ಕೆ ನಟ ಸೋನು ಸೂದ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ನಾನು ಸಸ್ಯಾಹಾರಿ... ನನ್ನ ಹೆಸರಿನಲ್ಲಿ ಮಟನ್ ಅಂಗಡಿಯೇ..? ಸಸ್ಯಾಹಾರಕ್ಕೆ ಸಂಬಂಧಿಸಿದ ಅಂಗಡಿ ತೆರೆಯಲು ನಾನು ಅವರಿಗೆ ಸಹಾಯ ಮಾಡಲೇ ಎಂದು ಪ್ರಶ್ನೆ ಮಾಡಿದ್ದಾರೆ. 

ಬಾಲಿವುಡ್ ನಟನ ಈ ಟ್ವೀಟ್‍ಗೆ 17 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ, 1,600 ನೆಟ್ಟಿಗರು ರೀಟ್ವೀಟ್ ಮಾಡಿದ್ದರೆ, ಸುಮಾರು ಒಂದು ಸಾವಿರ ಜನ ಸೋನು ಸೂದ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.  

ನಟನ ಹಾಸ್ಯಮಯ ಟ್ವೀಟ್‍ಗೆ ಹಲವರು ಹಾಸ್ಯದ ಧಾಟಿಯಲ್ಲೇ ಪ್ರತಿಕ್ರಿಯೆ ನೀಡಿದ್ದರೆ. ಕೆಲವರು ಸೋನು ಸೂದ್‍ರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಕೆಲವರು ಔಷಧಿ ಮುಂತಾದ ಅಗತ್ಯ ಸೇವೆಗಳಿಗೆ ಮನವಿ ಮಾಡಿಯೂ ಟ್ವೀಟ್ ಮಾಡಿರುವುದು ಕಂಡು ಬಂದಿದೆ. 


Stay up to date on all the latest ಬಾಲಿವುಡ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp