ದಯಮಾಡಿ ಪಟಾಕಿ ಹೊಡಿಬೇಡಿ: ಅಭಿಮಾನಿಗಳ ಅತಿರೇಕದ ವರ್ತನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬೇಸರ, ವಿಡಿಯೋ
ಬೆಂಗಳೂರು: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಚಿತ್ರ ಅಂತಿಮ್; ದಿ ಫೈನಲ್ ಟ್ರುತ್ ಬಿಡುಗಡೆಯಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಷ್ಟೇ ಉತ್ಸುಕರಾಗಿದ್ದರು. ಅಭಿಮಾನಿಗಳ ಅತಿರೇಕದ ಸಂಭ್ರಮಕ್ಕೆ ನಟ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರಮಂದಿರದಲ್ಲಿ ಪಟಾಕಿ ಹೊಡೆದಿರುವ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸಲ್ಲೂ ಮಿಯಾ, ಥಿಯೇಟರ್ ಗಳಲ್ಲಿ ಯಾವುದೇ ಕಾರಣಕ್ಕೂ ಪಟಾಕಿಯನ್ನು ಹೊಡೆಯಬೇಡಿ. ಇದರಿಂದ ಅವಘಡಗಳು ಸಂಭವಿಸಬಹುದಾದ ಸಂದರ್ಭಗಳು ಹೆಚ್ಚಿವೆ ಅಂತಾ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ಚಿತ್ರಮಂದಿರಗಳ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿರುವ ಸಲ್ಮಾನ್ ಖಾನ್, ಪಟಾಕಿಯೊಂದಿಗೆ ಅಭಿಮಾನಿಗಳು ಚಿತ್ರಮಂದಿರಗಳನ್ನು ಪ್ರವೇಶಿಸದಂತೆ ತಡೆಯಿರಿ ಅಂತಾ ತಿಳಿಸಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ನಂತರ ಅಭಿಮಾನಿಗಳು ಪಟಾಕಿ ಸಿಡಿಸಿದ್ದಾರೆ. ಈ ವೈರಲ್ ವಿಡಿಯೋವನ್ನೇ ಶೇರ್ ಮಾಡಿಕೊಂಡಿರುವ ಸಲ್ಮಾನ್ ಖಾನ್, ಇಂಥ ಅನಾಹುತಗಳನ್ನು ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

