43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎಆರ್ ರೆಹಮಾನ್‌ಗೆ ವಿಶೇಷ ಗೌರವ!
ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ 43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರನ್ನು ವಿಶೇಷವಾಗಿ ಗೌರವಿಸಲಾಗಿದೆ.
Published: 29th November 2021 03:14 PM | Last Updated: 29th November 2021 03:14 PM | A+A A-

ಎಆರ್ ರೆಹಮಾನ್
ಮುಂಬೈ: ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ 43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರನ್ನು ವಿಶೇಷವಾಗಿ ಗೌರವಿಸಲಾಗಿದೆ.
ಭಾರತದ ಸುಪ್ರಸಿದ್ಧ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಹಾಲಿವುಡ್‌ನಲ್ಲಿ ಸಂಗೀತ ನೀಡಿ ಹೆಸರುವಾಸಿಯಾಗಿದ್ದಾರೆ. ಇನ್ನು ತಮ್ಮನ್ನು 43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷವಾಗಿ ಸನ್ಮಾನಿಸಿದ್ದಾಗಿ 54 ವರ್ಷದ ರೆಹಮಾನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಅವರು ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ರೆಹಮಾನ್ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಎರಡು ಆಸ್ಕರ್ ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು BAFTA ಪ್ರಶಸ್ತಿಯನ್ನು ಗೌರವಿಸಿದ್ದಾರೆ. 2010ರಲ್ಲಿ ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿತು.
ರೆಹಮಾನ್ ಅವರ ವೃತ್ತಿಜೀವನವು ಮಣಿರತ್ನಂ ನಿರ್ದೇಶನದ ತಮಿಳು ಚಲನಚಿತ್ರ ರೋಜಾದಿಂದ ಪ್ರಾರಂಭವಾಯಿತು. ನಂತರ ಅವರು ತಮಿಳು ಮತ್ತು ತೆಲುಗು ಭಾಷೆಯ ಚಲನಚಿತ್ರಗಳಿಗೆ ಹಲವಾರು ಹಾಡುಗಳನ್ನು ರಚಿಸಿದರು.
1995ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ರಂಗೀಲಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಹಿಂದಿಯಲ್ಲಿ ಅವರ ಕೆಲವು ಅತ್ಯುತ್ತಮ ಧ್ವನಿಪಥಗಳಲ್ಲಿ ಗುರು, ರಾಕ್‌ಸ್ಟಾರ್, ದಿಲ್ ಸೆ, ರೋಜಾ, ಲಗಾನ್, ರಾಂಜನಾ ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳು ಸೇರಿವೆ.