ಮುಂಬೈ: ಅರ್ಥರ್ ರೋಡ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ಭೇಟಿ ಮಾಡಿದ ನಟ ಶಾರೂಕ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ನನ್ನು ಭೇಟಿ ಮಾಡಲು ಗುರುವಾರ ಮುಂಬೈಯ ಅರ್ಥೂರ್ ರೋಡ್ ಜೈಲಿಗೆ ಆಗಮಿಸಿದರು.
ಪುತ್ರನನ್ನು ನೋಡಲು ಜೈಲಿಗೆ ಆಗಮಿಸಿದ ನಟ ಶಾರೂಕ್ ಖಾನ್
ಪುತ್ರನನ್ನು ನೋಡಲು ಜೈಲಿಗೆ ಆಗಮಿಸಿದ ನಟ ಶಾರೂಕ್ ಖಾನ್
Updated on

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ನನ್ನು ಭೇಟಿ ಮಾಡಲು ಗುರುವಾರ ಮುಂಬೈಯ ಅರ್ಥೂರ್ ರೋಡ್ ಜೈಲಿಗೆ ಆಗಮಿಸಿದರು.

ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತು ಸೇವನೆ ಆರೋಪದ ಮೇಲೆ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಇತರರು ಕಳೆದ ಅಕ್ಟೋಬರ್ 2ರಂದು ಬಂಧಿತರಾಗಿದ್ದರು. ಆರಂಭದಲ್ಲಿ ಪೊಲೀಸ್ ಕಸ್ಟಡಿಗೆ ಕರೆದುಕೊಂಡು ನಂತರ ಆರ್ಯನ್ ಖಾನ್ ನನ್ನು ಬಂಧಿಸಲಾಗಿತ್ತು.

ಜಾಮೀನು ಅರ್ಜಿ ಕೋರಿ ಆರ್ಯನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈಯ ವಿಶೇಷ ಎನ್ ಡಿಪಿಎಸ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಆರ್ಯನ್ ಖಾನ್ ಪರ ವಕೀಲರು ತಕ್ಷಣವೇ ಎನ್ ಡಿಪಿಎಸ್ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ತಮ್ಮ ಪುತ್ರನ ಬಂಧ ಬಳಿಕ ಶಾರೂಕ್ ಖಾನ್ ಇದೇ ಮೊದಲ ಬಾರಿಗೆ ಜೈಲಿಗೆ ಪುತ್ರನ ಭೇಟಿಗೆ ಆಗಮಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳು, ಚಾನೆಲ್ ಗಳ ಕ್ಯಾಮರಾಗಳು ಅವರ ಬರುವಿಕೆಯನ್ನು ಕಾತರದಿಂದ ಸೆರೆಹಿಡಿದಿವೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com