ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಟಿ ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್ ದಂಪತಿ

ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಮಂಗಳವಾರ ಹೇಳಿಕೊಂಡಿದ್ದಾರೆ.
ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್
ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್
Updated on

ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಮಂಗಳವಾರ ಹೇಳಿಕೊಂಡಿದ್ದಾರೆ.

43 ವರ್ಷದ ಬಸು ಮತ್ತು 40 ವರ್ಷದ ಗ್ರೋವರ್, ತಾವು ಮೊದಲನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿರುವುದಾಗಿ ತಮ್ಮ ಸಾಮಾಜಿಕ ಮಾಧ್ಯಮಗಳ ಅಧಿಕೃತ ಖಾತೆಯಲ್ಲಿ ತಿಳಿಸಿದ್ದಾರೆ.

'ಹೊಸ ಸಮಯ, ಹೊಸ ಹಂತ, ಹೊಸ ಬೆಳಕು ನಮ್ಮ ಸುಂದರ ಜೀವನಕ್ಕೆ ಮತ್ತೊಂದು ಅನನ್ಯ ಛಾಯೆಯು ಸೇರ್ಪಡೆಯಾಗುತ್ತಿದೆ. ನಾವು ಹಿಂದೆಂದಿಗಿಂತಲೂ ಈಗ ತುಂಬು ಕುಟುಂಬವಾಗುತ್ತಿದ್ದೇವೆ' ಎಂದು ಬೇಬಿ ಬಂಪ್ ಪೋಟೊವನ್ನು ಬಿಪಾಶಾ ಹಂಚಿಕೊಂಡಿದ್ದಾರೆ.

'ನಾವು ಈ ಜೀವನವನ್ನು ಪ್ರತ್ಯೇಕವಾಗಿ ಪ್ರಾರಂಭಿಸಿದ್ದೇವೆ. ನಂತರ ನಾವು ಒಬ್ಬರನ್ನೊಬ್ಬರು ಭೇಟಿಯಾದೆವು ಮತ್ತು ಅಂದಿನಿಂದ ನಾವು ಇಬ್ಬರಾಗಿದ್ದೇವೆ. ಇಬ್ಬರಿಗೆ ಮಾತ್ರ ಅತಿಯಾದ ಪ್ರೀತಿಯನ್ನು ತೋರಿಸುವುದು ಸ್ವಲ್ಪ ಮೋಸವೆನಿಸುತ್ತದೆ. ಆದಷ್ಟು ಬೇಗ, ಒಮ್ಮೆ ಇಬ್ಬರಾಗಿದ್ದ ನಾವು ಈಗ ಮೂವರಾಗುತ್ತೇವೆ' ಎಂದು ಇಬ್ಬರೂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2015 ರಲ್ಲಿ 'ಅಲೋನ್' ಸಿನಿಮಾದಲ್ಲಿ ಮೊದಲು ಒಟ್ಟಿಗೆ ಕೆಲಸ ಮಾಡಿದ ದಂಪತಿ, 2016ರಲ್ಲಿ ವಿವಾಹವಾದರು. ಅವರು 2020ರ ವೆಬ್ ಸರಣಿ 'ಡೇಂಜರಸ್'ನಲ್ಲಿ ಸಹ ನಟಿಸಿದ್ದಾರೆ.

ಮಗು ಶೀಘ್ರದಲ್ಲೇ ಬರಲಿದೆ ಎಂದು ಬಸು ಮತ್ತು ಗ್ರೋವರ್ ಹೇಳಿದ್ದಾರೆ.

'ನಿಮ್ಮ ಪ್ರೀತಿಗಾಗಿ, ನಿಮ್ಮ ಪ್ರಾರ್ಥನೆಗಾಗಿ ಮತ್ತು ನಿಮ್ಮ ಶುಭಾಶಯಗಳಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮ್ಮ ಜೀವನದ ಭಾಗವಾಗಿದ್ದಕ್ಕಾಗಿ ಮತ್ತು ನಮ್ಮ ಮಗುವಿನ ಆಗಮನದೊಂದಿಗೆ ನಮ್ಮೊಂದಿಗೆ ಮತ್ತೊಂದು ಸುಂದರವಾದ ಜೀವನಕ್ಕೆ ಪ್ರವೇಶಿಸುತ್ತಿರುವುದಕ್ಕೆ ಧನ್ಯವಾದಗಳು' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com