
ಜಮ್ಮು-ಕಾಶ್ಮೀರ: ಇತ್ತೀಚಿಗೆ ಮೆಕ್ಕಾಕ್ಕೆ ತೆರಳಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಹಿಂದೂಗಳ ಪವಿತ್ರ ಕ್ಷೇತ್ರ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಯಾವುದೇ ಫೋಟೋ ತೆಗೆಯದಂತೆ ಹೇಳುವುದು ಕೇಳಿಸ್ತಾ ಇದೆ. ಶಾರೂಖ್ ಖಾನ್ ಕಾರಿನಿಂದ ಹೊರಗೆ ಬರುವ ದೃಶ್ಯವನ್ನು ಚಿತ್ರೀಕರಿಸಲು ಮುಂದಾದ ಛಾಯಾಗ್ರಾಹಕರೊಬ್ಬರನ್ನು ಅವರು ತಡೆಯುವ ದೃಶ್ಯ ಕೂಡಾ ವಿಡಿಯೋದಲ್ಲಿದೆ. ಇದರಲ್ಲಿ ಶಾರುಖ್ ಖಾನ್ ಅವರ ಫೋಟೋ ಕಾಣಿಸುತ್ತಿಲ್ಲ. ಇವರೊಂದಿಗೆ ಇರುವ ಎಲ್ಲರೂ ಕೂಡಾ ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದಾರೆ.
ವಿಡಿಯೋ ಕೊನೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಶಾರುಖ್ ಖಾನ್ ದೇವಾಲಯದಲ್ಲಿ ನಡೆದು ಹೋಗುವ ದೃಶ್ಯವಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಪಠಾಣ್ ಚಿತ್ರದ ಪೊದಲ ಸಾಂಗ್ ಇಂದು ಬಿಡುಗಡೆಯಾಗಿದೆ.
Advertisement