ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಟ್ ಅವತಾರ: ಫಸ್ಟ್ ಲುಕ್ ಹಂಚಿಕೊಂಡ ಶಾರುಖ್ ಖಾನ್!
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ 2023ರ ಬಹುನಿರೀಕ್ಷಿತ ಚಿತ್ರವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿವೆ. ಟೀಸರ್ ಮತ್ತು ಕೆಲವು ಪೋಸ್ಟರ್‌ಗಳ ನಂತರ ಇದೀಗ ಬೇಷರಂ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ.
Published: 09th December 2022 11:25 PM | Last Updated: 09th December 2022 11:25 PM | A+A A-

ದೀಪಿಕಾ ಪಡುಕೋಣೆ-ಶಾರುಖ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ 2023ರ ಬಹುನಿರೀಕ್ಷಿತ ಚಿತ್ರವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿವೆ. ಟೀಸರ್ ಮತ್ತು ಕೆಲವು ಪೋಸ್ಟರ್‌ಗಳ ನಂತರ ಇದೀಗ ಬೇಷರಂ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ.
ಶಾರುಖ್ ಖಾನ್ ಇಂದು ದೀಪಿಕಾ ಪಡುಕೋಣೆ ಅವರ ಹಾಡಿನ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಹಾಡು ಯಾವಾಗ ಬಿಡುಗಡೆಯಾಗಲಿದೆ? ನಟನ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಬೇಷರಂ ರಂಗ್ ಡಿಸೆಂಬರ್ 12ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ವಿಡಿಯೋವನ್ನು ಯಶ್ ರಾಜ್ ಫಿಲಂಸ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 2 ದಿನಗಳ ನಂತರ ಹಾಡನ್ನು ಈ ವಿಡಿಯೋದಲ್ಲಿ ನೋಡಬಹುದು.
#BesharamRang ka waqt aa gaya hai… almost! Song out on 12th December! https://t.co/F4TpXiidWz
Celebrate #Pathaan with #YRF50 only at a big screen near you on 25th January, 2023. Releasing in Hindi, Tamil and Telugu. pic.twitter.com/XMgCTbRECI— Shah Rukh Khan (@iamsrk) December 9, 2022
ದೀಪಿಕಾ ಮೋನೋಕಿನಿ ಲುಕ್
ಫಸ್ಟ್ ಲುಕ್ ನಲ್ಲಿ ದೀಪಿಕಾ ಚಿನ್ನದ ಮೊನೊಕಿನಿಯಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರ ಈ ಸ್ಟೈಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಿಕಾ ಅವರ ಈ ಲುಕ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ದೀಪಿಕಾ ಹಿರಿತೆರೆಯಲ್ಲಿ ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪಠಾಣ್ ಚಿತ್ರದ ಟ್ರೈಲರ್ ಇನ್ನೂ ಬಿಡುಗಡೆಯಾಗಿಲ್ಲ. ಚಿತ್ರದ ಟ್ರೇಲರ್‌ಗೂ ಮುನ್ನವೇ ಹಾಡನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸಿದ್ಧಾರ್ಥ್ ಆನಂದ್ ಹೇಳಿದ್ದರು. ಪ್ರೇಕ್ಷಕರಲ್ಲಿ ಪಠಾಣ್ ಬಗ್ಗೆ ಇರುವ ಕುತೂಹಲವನ್ನು ಉಳಿಸಿಕೊಳ್ಳಲು ಈ ತಂತ್ರವನ್ನು ಅಳವಡಿಸಿಕೊಳ್ಳಲಾಗುತ್ತಿದೆ.