ನಟಿ ತುನಿಶಾ ಶರ್ಮಾಗೆ ಅಂತಿಮ ವಿದಾಯ ಹೇಳಿದ ಕುಟುಂಬ, ಸಹೋದ್ಯೋಗಿಗಳು

ಟಿವಿ ಧಾರಾವಾಹಿಯೊಂದರ ಸೆಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 21 ವರ್ಷದ ಯುವ ನಟಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಮುಂಬೈನ ಮೀರಾ ರಸ್ತೆಯಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಯಿತು.
ತುನಿಶಾ ಶರ್ಮಾ
ತುನಿಶಾ ಶರ್ಮಾ

ಮುಂಬೈ: ಟಿವಿ ಧಾರಾವಾಹಿಯೊಂದರ ಸೆಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 21 ವರ್ಷದ ಯುವ ನಟಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಮುಂಬೈನ ಮೀರಾ ರಸ್ತೆಯಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಯಿತು.

ತುನಿಶಾ ಅವರ ತಾಯಿ ವನಿತಾ ಶರ್ಮಾ ಅವರು ಅಂತಿಮ ವಿಧಿವಿಧಾನಗಳನ್ನು ನಡೆಸಿದರು.

ನಟರಾದ ಕನ್ವರ್ ಧಿಲ್ಲೋನ್, ರೀಮ್ ಶೇಖ್, ಅಶ್ನೂರ್ ಕೌರ್, ಅವನೀತ್ ಕೌರ್, ಸಿದ್ಧಾರ್ಥ್ ನಿಗಮ್, ಅಭಿಷೇಕ್ ನಿಗಮ್, ಶಿವಿನ್ ನಾರಂಗ್, ವಿಶಾಲ್ ಜೇತ್ವಾ ಮತ್ತು ಇತರರು ನಟಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ತುನಿಶಾ ಅವರು ಟಿವಿ ಶೋ ಅಲಿಬಾಬಾ - ದಸ್ತಾನ್-ಎ-ಕಾಬೂಲ್‌ನ ಸೆಟ್‌ ನಲ್ಲಿ ತನ್ನ ಭಾಗದ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಮೇಕಪ್ ರೂಮ್ಗೆ ತೆರಳಿದ್ದರು. ಅಲ್ಲಿದ್ದ ಸಿಬ್ಬಂದಿ ಊಟಕ್ಕೆಂದು ಹೊರ ಹೋಗಿದ್ದರು. ಈ ವೇಳೆ ತುನಿಶಾ ಶರ್ಮಾ ಮೇಕಪ್ ರೂಮ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಬ್ಬಂದಿ ವಾಪಸ್ ಬಂದಾಗ ನಟಿಯ ಸಾವಿನ ಬಗ್ಗೆ ತಿಳಿದುಬಂದಿತ್ತು.

ತುನಿಶಾ ಶರ್ಮಾ ಸಹನಟ ಶೀಝಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಆದರೆ ೧೫ ದಿನಗಳ ಹಿಂದಷ್ಟೇ ಇಬ್ಬರೂ ದೂರವಾಗಿದ್ದರು. ಈ ಕಾರಣಕ್ಕಾಗಿ ನಟಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಟ ಶೀಝಾನ್ ಖಾನ್ ನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com