'ಎಮರ್ಜೆನ್ಸಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ: ಕಂಗನಾ, ಇಂದಿರಾ ಗಾಂಧಿ ತದ್ರೂಪಿಯೇ ಎಂದ ಅಭಿಮಾನಿಗಳು!

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಎಮರ್ಜೆನ್ಸಿ ಸಿನಿಮಾದ ಮೊದಲ ಲುಕ್ ಇಂದು ಬಿಡುಗಡೆಗೊಂಡಿದೆ.
ರಂಗನಾ ರಣಾವತ್
ರಂಗನಾ ರಣಾವತ್

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಎಮರ್ಜೆನ್ಸಿ ಸಿನಿಮಾದ ಮೊದಲ ಲುಕ್ ಇಂದು ಬಿಡುಗಡೆಗೊಂಡಿದೆ.

ಕಂಗನಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಒಂದು ನಿಮಿಷ 17 ಸೆಕೆಂಡ್ ಗಳ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಇಂದಿರಾ ಗಾಂಧಿ ಅವರ ಕೇಶ ವಿನ್ಯಾಸ ಮತ್ತು ಸೀರೆ ತೊಡುವ ಶೈಲಿಯನ್ನು ಯಥಾವತ್ ಅನುಕರಿಸಿದ್ದು, ಇಂದಿರಾ ಗಾಂಧಿಯವರ ತದ್ರೂಪಿಯಾಗಿದ್ದಾರೆ.

ಇವರ ಈ ವಿಡಿಯೋವನ್ನು 90 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇನ್ನು ಮಣಿಕರ್ಣಿಕಾ ಫಿಲ್ಮ್ಸ್ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಎಮರ್ಜೆನ್ಸಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಎಮರ್ಜೆನ್ಸಿ ಸಿನಿಮಾವನ್ನು ರಿತೇಶ್ ಶಾ ಬರೆದಿದ್ದಾರೆ. ಅವರು ಈ ಹಿಂದೆ ಧಾಕಡ್ ಸಿನಿಮಾವನ್ನು ಸಹ ಬರೆದಿದ್ದಾರೆ. ಜೂನ್‌ನಲ್ಲಿ, ಕಂಗನಾ ಅವರು ಎಮರ್ಜೆನ್ಸಿ ಚಿತ್ರಕ್ಕೆ ಹೆಸರಾಂತ ಪ್ರಾಸ್ಥೆಟಿಕ್ ಮೇಕಪ್ ಕಲಾವಿದ ಡೇವಿಡ್ ಮಲಿನೋವ್ಸ್ಕಿ ಅವರನ್ನು ಬರಮಾಡಿಕೊಂಡಿರುವುದಾಗಿ ಘೋಷಿಸಿದರು.

ಡೇವಿಡ್ 2017 ರ ಚಲನಚಿತ್ರ ಡಾರ್ಕೆಸ್ಟ್ ಅವರ್ ಗೆ ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸಕ್ಕಾಗಿ 2018 ರ BAFTA ಮತ್ತು ಆಸ್ಕರ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ವರ್ಲ್ಡ್ ವಾರ್ Z (2013) ಮತ್ತು ದಿ ಬ್ಯಾಟ್ ಮ್ಯಾನ್ (2022) ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com