ಮುಂಬೈ: ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಅವರು ತಮ್ಮ ಸಂಬಂಧವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತಗೊಳಿಸಿದಾಗಿನಿಂದ ನಿರಂತರವಾಗಿ ಟ್ರೆಂಡ್ ಆಗಿದ್ದಾರೆ.
ಗುರುವಾರ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಚಿತ್ರಗಳನ್ನು ಹಂಚಿಕೊಂಡು ಇಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆಂದು ಬಹಿರಂಗಪಡಿಸಿದರು. ಶುಕ್ರವಾರ ಈ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸುಶ್ಮಿತಾ ಸೇನ್, ನಾನು ಸಂತೋಷದ ಸ್ಥಳದಲ್ಲಿದ್ದೇನೆ! ಮದುವೆಯಾಗಿಲ್ಲ, ಉಂಗುರಗಳಿಲ್ಲ . ಬೇಷರತ್ ಪ್ರೀತಿ ಎಂದು ತಮ್ಮ ಮತ್ತು ಲಲಿತ್ ಮೋದಿ ನಡುವಿನ ಸಂಬಂಧವನ್ನು ಅಧಿಕೃತಗೊಳಿಸಿದರು.
ಈ ಬಗ್ಗೆ ಸುಶ್ಮಿತಾ ಸೇನ್ ಅವರ ಮಾಜಿ ಬಾಯ್ ಫ್ರೆಂಡ್, ಮಾಡೆಲ್ ರೋಹ್ಮನ್ ಶಾಲ್ ಕೂಡ ಸುಶ್ಮಿತಾ ಸೇನ್ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ಅವರು ಸಂತೋಷವಾಗಿರಲಿ. ಪ್ರೀತಿ ಸುಂದರವಾಗಿರುತ್ತದೆ.ಸುಶ್ಮಿತಾ ಅವರು ಯಾರನ್ನಾದರೂ ಆರಿಸಿದರೆ, ಅವರು ಆ ಪ್ರೀತಿಗೆ ಯೋಗ್ಯರಾಗಿರುತ್ತಾನೆಂದು ನನಗೆ ಗೊತ್ತು ಎಂದಿದ್ದಾರೆ.
ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ 2018 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಕಳೆದ ವರ್ಷ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಇಬ್ಬರೂ ದೂರವಾಗುತ್ತಿರುವುದಾಗಿ ಘೋಷಿಸಿದರು. ಮಾಡೆಲ್ ಆಗಿರುವ ರೋಹ್ಮನ್ ಶಾಲ್ ಹಲವು ಟಾಪ್ ಡಿಸೈನರ್ ಗಳಿಗೆ ರ್ಯಾಪ್ ವಾಕ್ ಮಾಡಿದ್ದಾರೆ. ಅವರು ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
Advertisement