ಜೈಲಿಗೆ ಹಾಕುವಂತಹ ತಪ್ಪು ನಾನು ಮಾಡಿದ್ದೆನೇ?: NCB ಅಧಿಕಾರಿಗಳ ಮುಂದೆ ಆರ್ಯನ್ ಖಾನ್ ಹೇಳಿದ್ದೇನು?

2021ರ ಅಕ್ಟೋಬರ್ ನಲ್ಲಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಕ್ಲೀನ್ ಚಿಟ್ ಪಡೆದಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ನಡೆಸಿದ ಸಂವಹನದ ವಿವರಗಳನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಉಪ ಮಹಾ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಆರ್ಯನ್ ಖಾನ್
ಆರ್ಯನ್ ಖಾನ್
Updated on

ಮುಂಬೈ: 2021ರ ಅಕ್ಟೋಬರ್ ನಲ್ಲಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಕ್ಲೀನ್ ಚಿಟ್ ಪಡೆದಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ನಡೆಸಿದ ಸಂವಹನದ ವಿವರಗಳನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಉಪ ಮಹಾ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಬಹಿರಂಗಪಡಿಸಿದ್ದಾರೆ.

ವಿಶೇಷ ತನಿಖಾ ತಂಡದ (SIT) ನೇತೃತ್ವ ವಹಿಸಿದ್ದ ಸಂಜಯ್ ಕುಮಾರ್ ಸಿಂಗ್ ಇತ್ತೀಚೆಗೆ ಮ್ಯಾಗಜೀನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಆರ್ಯನ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಲು ತಾನು ಸಿದ್ಧನಾಗಿ ಬಂದಿರಲಿಲ್ಲ, ಈ ಬಂಧನದಲ್ಲಿ ತಾನು ಮುಕ್ತವಾಗಿದ್ದೇನೆ ಎಂದು ಹೇಳಿ ಆರ್ಯನ್ ಖಾನ್ ನನ್ನು ನಂಬಿಸುವುದು ಆ ಕ್ಷಣದಲ್ಲಿ ಕಷ್ಟವಾಗಿತ್ತು ಎನ್ನುತ್ತಾರೆ.

ಆರ್ಯನ್ ಖಾನ್ ತನ್ನ ಬಳಿ, ನೀವು ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಎಂದು ಬಿಂಬಿಸಿದ್ದೀರಿ, ನಾನು ಡ್ರಗ್ ಕಳ್ಳಸಾಗಣೆಗೆ ಬಂಡವಾಳ ಹೂಡಿದ್ದೇನೆ ಎಂದು ಹೇಳುತ್ತಿದ್ದೀರಿ, ಈ ಆರೋಪಗಳು ಸರಿಯೇ, ತಪ್ಪಲ್ಲವೇ? ನನ್ನ ಬಳಿ ಡ್ರಗ್ಸ್ ಇಲ್ಲದಿದ್ದರೂ ನನ್ನನ್ನು ಬಂಧಿಸಲಾಯಿತು. ನೀವು ದೊಡ್ಡ ತಪ್ಪು ಮಾಡಿದ್ದೀರಿ, ನನ್ನ ಪ್ರತಿಷ್ಠೆಯನ್ನು ಹಾಳು ಮಾಡಿದ್ದೀರಿ, ಯಾಕೆ ನಾನು ಹಲವು ವಾರಗಳ ಕಾಲ ಜೈಲಿನಲ್ಲಿ ಕಳೆಯಬೇಕು, ನಿಜವಾಗಿಯೂ ಜೈಲಿನಲ್ಲಿರಲು ನಾನು ಅರ್ಹನೇ, ನಾನೇನು ತಪ್ಪು ಮಾಡಿದ್ದೇನೆ ಎಂದು ಅಲವತ್ತುಕೊಂಡನು ಎಂದು ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇನ್ನು ತಮ್ಮ ಬಳಿ ಬಂದಿದ್ದ ಶಾರೂರ್ ಖಾನ್, ನನ್ನ ಮಗನಿಗೆ ಜೈಲಿನಲ್ಲಿ ಸರಿಯಾಗಿ ನಿದ್ದೆ ಬರುತ್ತಿಲ್ಲ, ಯಾವುದೇ ಸ್ಪಷ್ಟ ಸಾಕ್ಷ್ಯಾಧಾರಗಳು ಸಿಗದಿದ್ದರೂ ಕೂಡ ಬಂಧಿಸಿ ಜೈಲಿನಲ್ಲಿಟ್ಟಿರುವುದರಿಂದ ನನ್ನ ಮಗ ತೀವ್ರ ನೊಂದಿದ್ದಾನೆ ಎಂದು ಹೇಳಿದ್ದರು ಎಂದು ಕೂಡ ಸಿಂಗ್ ಬಹಿರಂಗಪಡಿಸಿದ್ದಾರೆ.

ಸಮಾಜವನ್ನು ನಾಶಮಾಡಲು ಹೊರಟಿರುವ ಕೆಲವರು ನಮ್ಮನ್ನು ದೊಡ್ಡ ಕ್ರಿಮಿನಲ್‌ಗಳು ಅಥವಾ ರಾಕ್ಷಸರಂತೆ ಬಿಂಬಿಸಲು ಹೊರಟಿದ್ದಾರೆ, ಇದರಿಂದ ನಮಗೆ ತುಂಬ ಕಷ್ಟವಾಗುತ್ತಿದೆ ಎಂದು ಭಾವುಕರಾಗಿ ಶಾರೂಕ್ ಖಾನ್ ನುಡಿದಿದ್ದರು ಎಂದರು.

ಕಳೆದ ಅಕ್ಟೋಬರ್‌ನಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡ ಆರೋಪದ ನಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟ 20 ಜನರ ಪೈಕಿ 14 ಜನರ ವಿರುದ್ಧ ಮೇ 29 ರಂದು ಎನ್‌ಸಿಬಿ ಮುಂಬೈ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಕಳೆದ ಅಕ್ಟೋಬರ್‌ನಲ್ಲಿ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡ ಆರೋಪದ ನಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟ 20 ಜನರ ಪೈಕಿ 14 ಜನರ ವಿರುದ್ಧ ಕಳೆದ ಮೇ 29 ರಂದು ಎನ್‌ಸಿಬಿ ಮುಂಬೈ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಅವರಲ್ಲಿ ಆರ್ಯನ್ ಖಾನ್ ಸೇರಿದಂತೆ ಆರು ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸಿನಿಂದ ಕೈಬಿಟ್ಟು ಕ್ಲೀನ್ ಚಿಟ್ ನೀಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com