ಬಿಗ್ ಬಾಸ್ ಮನೆಗೆ ಕಳಿಸಿ, ಸಾಜಿದ್ ಖಾನ್‌ ಖಾಸಗಿ ಭಾಗಗಳಿಗೆ ರೇಟಿಂಗ್ ಕೊಡ್ತೀನಿ: ಶೆರ್ಲಿನ್ ಚೋಪ್ರಾ

2018 ರಲ್ಲಿ #MeToo ವಿವಾದದಲ್ಲಿ ಸಿಲುಕಿದ್ದ ಚಲನಚಿತ್ರ ನಿರ್ದೇಶಕ ಸಾಜಿದ್ ಖಾನ್ ಅವರನ್ನು ರಿಯಾಲಿಟಿ ಟೆಲಿವಿಷನ್ ಶೋ 'ಬಿಗ್ ಬಾಸ್' ಮನೆಯೊಳಗೆ ಸೇರಿಸಿಕೊಂಡಿದ್ದಕ್ಕೆ ನಟಿ ಮತ್ತು ಸೆಲೆಬ್ರಿಟಿ ಶೆರ್ಲಿನ್ ಚೋಪ್ರಾ ಅವರು ತೀವ್ರ ಆಕ್ರೋಶ...
ಶೆರ್ಲಿನ್ ಚೋಪ್ರಾ
ಶೆರ್ಲಿನ್ ಚೋಪ್ರಾ
Updated on

ಮುಂಬೈ: 2018 ರಲ್ಲಿ #MeToo ವಿವಾದದಲ್ಲಿ ಸಿಲುಕಿದ್ದ ಚಲನಚಿತ್ರ ನಿರ್ದೇಶಕ ಸಾಜಿದ್ ಖಾನ್ ಅವರನ್ನು ರಿಯಾಲಿಟಿ ಟೆಲಿವಿಷನ್ ಶೋ 'ಬಿಗ್ ಬಾಸ್' ಮನೆಯೊಳಗೆ ಸೇರಿಸಿಕೊಂಡಿದ್ದಕ್ಕೆ ನಟಿ ಮತ್ತು ಸೆಲೆಬ್ರಿಟಿ ಶೆರ್ಲಿನ್ ಚೋಪ್ರಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಜಿದ್‌ ಖಾನ್ ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಇತರ ಹಲವಾರು ಮಹಿಳೆಯರೊಂದಿಗೆ ತನ್ನ ಧ್ವನಿಯನ್ನು ಕೇಳಲು ಬಯಸುವುದಾಗಿ ನಟಿ ಸ್ಪಷ್ಟಪಡಿಸಿದ್ದಾರೆ.

ಮುಂಬೈನಲ್ಲಿರುವ ತಮ್ಮ ಜುಹು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆರ್ಲಿನ್, "ನಾನು ಸಾಜಿದ್‌ ಖಾನ್ ಅವರ ಖಾಸಗಿ ಭಾಗಗಳಿಗೆ ರೇಟಿಂಗ್ ಕೊಡಲು ಬಯಸಿದ್ದೇನೆ. ಸಾಜಿದ್ ಖಾನ್‌ನಂತಹ ದುಷ್ಕರ್ಮಿಗಳಿಗೆ ಬೇರೆ ಯಾವುದೇ ಮಹಿಳೆ ಬಲಿಯಾಗುವುದು ಬೇಡ ಎಂದು ಹೇಳಿದ್ದಾರೆ.

ನನಗೆ 'ಬಿಗ್ ಬಾಸ್' ಮನೆಯೊಳಗೆ ಹೋಗಲು ಅವಕಾಶ ನೀಡಬೇಕು. ಸ್ಪರ್ಧಿಯಾಗಿ ಅಲ್ಲ, ಆದರೆ ಸಾಜಿದ್ ಖಾನ್ ಅವರೊಂದಿಗೆ ಮುಖಾಮುಖಿಯಾಗಲು ಕೇವಲ ಒಂದು ದಿನ ಅವಕಾಶ ನೀಡಬೇಕು. ಇದರಿಂದ ರಾಷ್ಟ್ರೀಯ ಟಿವಿಯಲ್ಲಿ ಸತ್ಯವನ್ನು ಬೆಳಕಿಗೆ ತರಬಹುದು  ಎಂದು ಅವರು ಹೇಳಿದ್ದಾರೆ.

"ಬಿಗ್ ಬಾಸ್' ನಿರ್ಮಾಪಕರು ನನ್ನನ್ನು ಮತ್ತು ಸಾಜಿದ್ ಖಾನ್ ರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ  ಮಹಿಳೆಯರನ್ನು ಕೇವಲ ಒಂದು ದಿನದ ರಿಯಾಲಿಟಿ ಶೋಗೆ ಕರೆಯಬೇಕು ಎಂದು ನಾನು ಕಾಯುತ್ತಿದ್ದೇನೆ. ನಾನು ರಾಷ್ಟ್ರೀಯ ಟಿವಿಯಲ್ಲಿ ಬಂದು ಅವರನ್ನು ಎದುರಿಸುತ್ತೇನೆ ಮತ್ತು ಅವರ ಖಾಸಗಿ ಭಾಗಗಳನ್ನು ಕ್ಯಾಮೆರಾಗಾಗಿ ಫ್ಲ್ಯಾಷ್ ಮಾಡಲು ಕೇಳುತ್ತೇನೆ ಮತ್ತು ರೇಟಿಂಗ್ ನೀಡುತ್ತೇನೆ. ಹಲವಾರು ವರ್ಷಗಳ ಹಿಂದೆ ನಾನು ಅವರ ಸ್ಥಳಕ್ಕೆ ಹೋದಾಗ ಅವರು ತನ್ನ ಗುಪ್ತಾಂಗವನ್ನು ತೋರಿಸಿ 0-10ರ ಒಳಗಡೆ ಒಂದು ರೇಟಿಂಗ್ ನೀಡಿ ಎಂದು ಕೇಳಿದ್ದರು. ಈಗ ಬಿಗ್ ಬಾಸ್ ಮನೆಗೆ ಹೋಗಿ ಅವರಿಗೆ ರೇಟಿಂಗ್ ನೀಡಲು ಬಯಸುವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com