ದೇಶದ ಯುವ ಪೀಳಿಗೆಯ ಮನಸ್ಸನ್ನು ಹಾಳುಮಾಡುತ್ತಿದ್ದೀರಿ: ಏಕ್ತಾ ಕಪೂರ್ ಗೆ ಸುಪ್ರೀಂ ಕೋರ್ಟ್ ಛೀಮಾರಿ!

ವೆಬ್ ಸರಣಿ 'XXX' ನಲ್ಲಿನ 'ಆಕ್ಷೇಪಾರ್ಹ ವಿಷಯ' ಕುರಿತು ನಿರ್ಮಾಪಕ ಏಕ್ತಾ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಇದು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಭ್ರಷ್ಟಗೊಳಿಸುತ್ತಿದೆ ಎಂದು ಹೇಳಿದೆ.
ಏಕ್ತಾ ಕಪೂರ್
ಏಕ್ತಾ ಕಪೂರ್

ನವದೆಹಲಿ: ವೆಬ್ ಸರಣಿ 'XXX' ನಲ್ಲಿನ 'ಆಕ್ಷೇಪಾರ್ಹ ವಿಷಯ' ಕುರಿತು ನಿರ್ಮಾಪಕ ಏಕ್ತಾ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಇದು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಭ್ರಷ್ಟಗೊಳಿಸುತ್ತಿದೆ ಎಂದು ಹೇಳಿದೆ.

ತನ್ನ ಒಟಿಟಿ ಪ್ಲಾಟ್‌ಫಾರ್ಮ್ 'ಆಲ್ಟ್ ಬಾಲಾಜಿ'ಯಲ್ಲಿ ಪ್ರಸಾರವಾದ ವೆಬ್ ಸರಣಿಯಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬದವರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕಪೂರ್ ಅವರ ವಿರುದ್ಧ ಹೊರಡಿಸಲಾದ ಬಂಧನ ವಾರಂಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸುಪ್ರೀಂ ಕೋರ್ಟ್ ಪೀಠ, 'ನೀವು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದೀರಿ. OTT ನಲ್ಲಿ ಎಲ್ಲರೂ ಇದನ್ನು ಕಾಣಬಹುದಾಗಿದೆ. ನೀವು ಜನರಿಗೆ ಯಾವ ರೀತಿಯ ಆಯ್ಕೆಗಳನ್ನು ನೀಡುತ್ತೀರಿ? ಯುವಕರ ಮನಸ್ಸನ್ನು ಕೆಡಿಸುತ್ತಿದ್ದೀರಿ. ಮುಂದೆ ಏಕ್ತಾ ಅವರಿಗೆ ಎಚ್ಚರಿಕೆ ನೀಡಿದ ಕೋರ್ಟ್, 'ನೀವು ಈ ನ್ಯಾಯಾಲಯಕ್ಕೆ ಬಂದಾಗಲೆಲ್ಲಾ... ನಾವು ಅದನ್ನು ಪ್ರಶಂಸಿಸುವುದಿಲ್ಲ. ಅಂತಹ ಅರ್ಜಿಯನ್ನು ಸಲ್ಲಿಸಲು ನಾವು ನಿಮಗೆ ವೆಚ್ಚವನ್ನು ವಿಧಿಸುತ್ತೇವೆ ಎಂದರು. 

ಅಷ್ಟೇ ಅಲ್ಲ ಏಕ್ತಾ ಕಪೂರ್ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು ಏಕ್ತಾ ಕಪೂರ್ ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಈ ವಿಧಾನ ಸರಿಯಲ್ಲ. ನಿಮ್ಮ ಕಕ್ಷಿದಾರರು ಬಳಿ ಹಣವಿರಬಹುದು. ಆಕೆ ಸಮರ್ಥ ವಕೀಲರನ್ನು ನೇಮಿಸಿಕೊಳ್ಳಬಹುದು. ಆಗಂತ ನೀವು ಹೇಳಿದ್ದನೆಲ್ಲಾ ಕೋರ್ಟ್ ಕೇಳಿಸಿಕೊಳ್ಳುತ್ತದೆ ಅಂತ ಭಾವಿಸಿದ್ದೀರಾ. ಧ್ವನಿ ಇಲ್ಲದವರಿಗೂ ಈ ಕೋರ್ಟ್ ಇದೆ. ಬಡವರ ಸ್ಥಿತಿಯ ಬಗ್ಗೆ ಯೋಚಿಸಿ' ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಮಾಜಿ ಸೈನಿಕ ಮತ್ತು ಬೇಗುಸರಾಯ್ ನಿವಾಸಿ ಶಂಭು ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಧೀಶ ವಿಕಾಸ್ ಕುಮಾರ್ ವಾರಂಟ್ ಹೊರಡಿಸಿದ್ದಾರೆ. ಶಂಭುಕುಮಾರ್ ಅವರು 2020 ರಲ್ಲಿ ತಮ್ಮ ದೂರಿನಲ್ಲಿ, ‘XXX’ (ಸೀಸನ್-2) ಸರಣಿಯು ಸೈನಿಕನ ಹೆಂಡತಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com