ನಡುರಾತ್ರಿ ಕರೆದಾಗ ಹೋದರೆ ಮಾತ್ರ ಚಾನ್ಸ್: ಬಾಲಿವುಡ್ 'ಎ-ಲಿಸ್ಟ್‌' ಹೀರೋಗಳ ಮುಖವಾಡ ಕಳಚಿಟ್ಟ ಮಲ್ಲಿಕಾ ಶೆರಾವತ್!   

ಬಾಲಿವುಡ್​ನ ಟಾಪ್​ ಹೀರೋಗಳ ಮೇಲೆ ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಯಾರ ಹೆಸರನ್ನೂ ಅವರು ಪ್ರತ್ಯೇಕವಾಗಿ ಹೇಳಿಲ್ಲ. ಮಲ್ಲಿಕಾ ಶೆರಾವತ್ ನೀಡಿದ ಬೋಲ್ಡ್​ ಹೇಳಿಕೆಯಿಂದಾಗಿ ಹೊಸ ಚರ್ಚೆ ಶುರುವಾಗಿದೆ.
ಮಲ್ಲಿಕಾ ಶೆರಾವತ್
ಮಲ್ಲಿಕಾ ಶೆರಾವತ್

ಮುಂಬೈ: ಮರ್ಡರ್​ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದ ಬೋಲ್ಡ್​ ಬ್ಯೂಟಿ ಮಲ್ಲಿಕಾ ಶೆರಾವತ್ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದು, ಅವರ ನಟನೆಯ “ಆರ್​ಕೆ” ಚಿತ್ರ ಜುಲೈ 22ರಂದು ಬಿಡುಗಡೆಗೊಂಡು ಜನರ ಗಮನ ಸೆಳೆದಿದೆ. ಇದರ ನಡುವೆ ಮಲ್ಲಿಕಾ, ಬಾಲಿವುಡ್​ನ ಕೊಳಕು ಮನಸ್ಥಿತಿಗಳ ಬಗ್ಗೆ ಧೈರ್ಯದಿಂದ ಮಾತನಾಡಿದ್ದಾರೆ.

ನಟಿ ಮಲ್ಲಿಕಾ ಶೆರಾವತ್​  ಅವರು ಹಿಂದಿ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಅವರು ನಂತರ ತೆರೆಮರೆಗೆ ಸರಿದರು. ಆ ರೀತಿ ಆಗಿದ್ದಕ್ಕೆ ಕಾರಣ ಏನು ಎಂದು ಅವರು ಈಗ ಬಾಯಿ ಬಿಟ್ಟಿದ್ದಾರೆ. ಕಾಸ್ಟಿಂಗ್​ ಕೌಚ್ ​ ಪಿಡುಗಿನ ಬಗ್ಗೆ ಈಗಾಗಲೇ ಅನೇಕ ನಟಿಯರು ಮಾತನಾಡಿದ್ದಾರೆ. ಮಲ್ಲಿಕಾ ಶೆರಾವತ್​ ಅವರು ಇನ್ನಷ್ಟು ವಿವರಗಳನ್ನು ತೆರೆದಿಟ್ಟಿದ್ದಾರೆ.

ಬಾಲಿವುಡ್​ನ ಟಾಪ್​ ಹೀರೋಗಳ ಮೇಲೆ ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಯಾರ ಹೆಸರನ್ನೂ ಅವರು ಪ್ರತ್ಯೇಕವಾಗಿ ಹೇಳಿಲ್ಲ. ಮಲ್ಲಿಕಾ ಶೆರಾವತ್ ನೀಡಿದ ಬೋಲ್ಡ್​ ಹೇಳಿಕೆಯಿಂದಾಗಿ ಹೊಸ ಚರ್ಚೆ ಶುರುವಾಗಿದೆ. ಹಿಂದಿ ಚಿತ್ರರಂಗದ ಕರಾಳ ಮುಖವನ್ನು ಅವರು ಬಯಲಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾ, ಸಂಧಾನಕ್ಕೆ ಒಪ್ಪಿಕೊಳ್ಳದಿದ್ದಕ್ಕೆ ಸಾಕಷ್ಟು ಸಿನಿಮಾಗಳಿಂದ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್​ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್​ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು.

ನಟರು ತಾವು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಇಷ್ಟಪಡುತ್ತಾರೆ. ಆದರೆ, ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದರು.

ಮುಂಜಾನೆ 3 ಗಂಟೆಗೆ ನಟನೊಬ್ಬ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಕರೆದರೆ, ಒಂದು ವೇಳೆ ನೀವು ಆ ವಲಯದಲ್ಲಿ ಇದ್ದರೆ ಮತ್ತು ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಲೇಬೇಕು. ನೀವೇನಾದರೂ ಹೋಗದಿದ್ದರೆ, ನಿಮ್ಮನ್ನು ಆ ಸಿನಿಮಾದಿಂದಲೇ ಹೊರ ಹಾಕುತ್ತಾರೆಂದು ಮಲ್ಲಿಕಾ ಹೇಳಿದ್ದಾರೆ.

2002ರಲ್ಲಿ ಮಲ್ಲಿಕಾ ಶೆರಾವತ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್​ ಸಿಕ್ಕಿದ್ದು 2004ರ ‘ಮರ್ಡರ್​’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com