ಜಿಮ್ ಮಾಡುತ್ತಿದ್ದ ವೇಳೆ ಹಿರಿಯ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು!
ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಬಾಲಿವುಡ್ ನ ಹಿರಿಯ ಹಾಸ್ಯ ನಟ ರಾಜು ಶ್ರೀವಾತ್ಸವ ಅವರಗೆ ಇಂದು ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Published: 10th August 2022 04:09 PM | Last Updated: 10th August 2022 04:09 PM | A+A A-

ರಾಜು ಶ್ರೀವಾತ್ಸವ
ನವದೆಹಲಿ: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಬಾಲಿವುಡ್ ನ ಹಿರಿಯ ಹಾಸ್ಯ ನಟ ರಾಜು ಶ್ರೀವಾತ್ಸವ ಅವರಗೆ ಇಂದು ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ನಟನನ್ನು ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಹೃದಯಾಘಾತ ಆಗಿರುವುದು ಖಡಿತಪಡಿಸಿದ ವೈದ್ಯರು ಸದ್ಯ ಅವರ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ಆತಂಕ ಬೇಡ ಎಂದು ಹೇಳಿದ್ದಾರೆ.
1980ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ 58 ವರ್ಷದ ರಾಜು ಅವರು, ಮೈನೆ ಪ್ಯಾರ್ ಕಿಯಾ, ಬಾಜಿಗರ್, ಬಾಂಬೈ ಟು ಗೋವಾ ಮತ್ತು ಆಮದಾನಿ ಅತ್ಠಾನಿ ಖರ್ಚ ರುಪಯ್ಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಅವರು ಹಿಂದಿಯ ಬಿಗ್ ಬಾಸ್ 3ನೇ ಆವೃತ್ತಿಯಲ್ಲೂ ಭಾಗವಹಿಸಿದ್ದರು.
ಸದ್ಯ ರಾಜು ಶ್ರೀವಾತ್ಸವ ಅವರು ಉತ್ತರಪ್ರದೇಶದ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರಾಗಿದ್ದಾರೆ.