215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ ಎಂದು ಹೆಸರಿಸಿದ ಇ.ಡಿ!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. 215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೆಸರಿಸಿದೆ.
ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್

ನವದೆಹಲಿ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. 215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೆಸರಿಸಿದ್ದು, ಇಂದು (ಬುಧವಾರ) ನಟಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಉದ್ಯಮಿಗಳಿಂದ ₹215 ಕೋಟಿ ಸುಲಿಗೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿರುವ ಇ.ಡಿ, ಶ್ರೀಲಂಕಾ ಮೂಲದ ನಟಿಗೆ ಆತ ನೀಡಿದ್ದ₹ 7 ಕೋಟಿ ಮೌಲ್ಯದ ಉಡುಗೊರೆಗಳು ಮತ್ತು ಆಸ್ತಿಗಳನ್ನು ಜಪ್ತಿ ಮಾಡಿತ್ತು. ಅಲ್ಲದೆ, ಅವುಗಳನ್ನು ಅಪರಾಧದ ಆದಾಯ ಎಂದೂ ಪರಿಗಣಿಸಿತ್ತು.

ಜಾಕ್ವೆಲಿನ್ ಫರ್ನಾಂಡಿಸ್ ಸುಲಿಗೆ ಹಣದ ಫಲಾನುಭವಿ ಎಂದು ಇ.ಡಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಸುಕೇಶ್ ಚಂದ್ರಶೇಖರ್ ಸುಲಿಗೆಕೋರ ಎಂಬುದು ಜಾಕ್ವೆಲಿನ್ ಅವರಿಗೆ ಮೊದಲೇ ತಿಳಿದಿತ್ತು ಎಂದು ಇ.ಡಿ ಹೇಳಿದೆ.

2021ರ ಡಿಸೆಂಬರ್‌ನಲ್ಲಿ ಸುಕೇಶ್‌ ಚಂದ್ರಶೇಖರ್‌ ಅವರ ಆಪ್ತ ಪಿಂಕಿ ಇರಾನಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. 2022ರ ಫೆಬ್ರವರಿಯಲ್ಲಿ, ಈತನ ವಿರುದ್ಧ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.

ಇರಾನಿ ಅವರು ಜಾಕ್ವೆಲಿನ್ ಫರ್ನಾಂಡಿಸ್‌ಗೆ ದುಬಾರಿ ಉಡುಗೊರೆಗಳನ್ನು ಆಯ್ಕೆ ಮಾಡುತ್ತಿದ್ದರು. ಸುಕೇಶ್ ಚಂದ್ರಶೇಖರ್ ಇವುಗಳಿಗೆ ಹಣ ಪಾವತಿಸಿದ ಬಳಿಕ ಅವುಗಳನ್ನು ಜಾಕ್ವೆಲಿನ್ ಅವರ ಮನೆಗೆ ತಲುಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಸುಕೇಶ್ ವಿವಿಧ ಮಾಡೆಲ್‌ಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಸುಮಾರು ₹ 20 ಕೋಟಿಯನ್ನು ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಕೆಲವರು ಆತನಿಂದ ಉಡುಗೊರೆ ಪಡೆಯಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com