ಮುಂದಿನ ಬಾರಿ ಗಂಭೀರ ಸಂಶೋಧನೆ ಮಾಡಿ: ವಿವೇಕ್‌ ಅಗ್ನಿಹೋತ್ರಿ, ಅನುರಾಗ್‌ ಕಶ್ಯಪ್‌ 'ಕಾಂತಾರ' ಟ್ವೀಟ್‌ ವಾರ್‌

ಅನುರಾಗ್‌ ಕಶ್ಯಪ್‌  ಅವರು ಇತ್ತೀಚಿನ ಚಲನಚಿತ್ರಗಳ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆಗೆ ಆಕ್ಷೇಪಿಸಿ  ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ನೀಡಿದ ಹೇಳಿಕೆ ಇಬ್ಬರು ನಡುವೆ ಟ್ವೀಟ್‌ ವಾರ್‌ಗೆ ಕಾರಣವಾಯಿತು.
ವಿವೇಕ್ ಅಗ್ನಿಹೋತ್ರಿ ಮತ್ತು ಅನುರಾಗ್ ಕಶ್ಯಪ್
ವಿವೇಕ್ ಅಗ್ನಿಹೋತ್ರಿ ಮತ್ತು ಅನುರಾಗ್ ಕಶ್ಯಪ್

ಅನುರಾಗ್‌ ಕಶ್ಯಪ್‌  ಅವರು ಇತ್ತೀಚಿನ ಚಲನಚಿತ್ರಗಳ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆಗೆ ಆಕ್ಷೇಪಿಸಿ  ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ನೀಡಿದ ಹೇಳಿಕೆ ಇಬ್ಬರು ನಡುವೆ ಟ್ವೀಟ್‌ ವಾರ್‌ಗೆ ಕಾರಣವಾಯಿತು.

ಸಂದರ್ಶದಲ್ಲಿ ಅನುರಾಗ್​ ಕಶ್ಯಪ್​ ‘ಎಲ್ಲರೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಯಶಸ್ಸಿನ ಪ್ರಮಾಣ ಕೇವಲ 5-10 ಪರ್ಸೇಂಟ್​​​​ ಅಷ್ಟೆ. ‘ಕಾಂತಾರ’ ಹಾಗೂ ‘ಪುಷ್ಪ’ದಂತಹ ಸಿನಿಮಾಗಳು ಬಾಲಿವುಡ್​ ಇಂಡಸ್ಟ್ರಿಯನ್ನ ಹಾಳು ಮಾಡುತ್ತವೆ’ ಎಂದು ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದರು.

ಅನುರಾಗ್‌ ಕಶ್ಯಪ್‌ ಅವರು ಹೇಳಿದ್ದಾರೆನ್ನಲಾದ  ಸಂದರ್ಶನದ ಸ್ಕ್ರೀನ್‌ ಶಾಟ್‌ ಒಂದನ್ನು ಅಗ್ನಿಹೋತ್ರಿ ಶೇರ್‌ ಮಾಡಿದ್ದರಲ್ಲದೆ "ನಾನು ಬಾಲಿವುಡ್‌ನ ಏಕೈಕ ಮೈಲಾರ್ಡ್‌ನೊಂದಿಗೆ ಈ ಕುರಿತು ಸಂಪೂರ್ಣವಾಗಿ ಒಪ್ಪುವುದಿಲ್ಲ," ಎಂದು‌ ಬರೆದಿದ್ದರು.

ಇದನ್ನು ಇನ್ನೂ ಮುಂದುವರೆಸಿದ ಅನುರಾಗ್​ ಕಶ್ಯಪ್​, ‘ಸರ್, ಇದು ನಿಮ್ಮ ತಪ್ಪಲ್ಲ. ನಮ್ಮ ಸಂಭಾಷಣೆಯ ರೀತಿಯಲ್ಲೇ ನಿಮ್ಮ ಚಲನಚಿತ್ರಗಳ ರಿಸರ್ಚ್​ ಕೂಡ ಇದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿಯೂ ಅದೇ. ಮುಂದಿನ ಬಾರಿ ಸ್ವಲ್ಪ ಗಂಭೀರವಾದ ಸಂಶೋಧನೆ ಮಾಡಿ’ ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಅಗ್ನಿಹೋತ್ರಿ, ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕಾಗಿ ನಡೆಸಿದ ನಾಲ್ಕು ವರ್ಷದ ಸಂಶೋಧನೆ ಸುಳ್ಳು ಎಂದು ಸಾಬೀತು ಪಡಿಸಿ ಎಂದರಲ್ಲದೆ ಕಶ್ಯಪ್‌ ಅವರ ಇತ್ತೀಚೆಗೆ ಬಿಡುಗಡೆಗೊಂಡ ʼದೊಬಾರಾʼ ಚಿತ್ರವನ್ನು ಟಾರ್ಗೆಟ್‌ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com