ಗಾಲ್ವಾನ್ ಸಂಘರ್ಷ ಕುರಿತು ವಿವಾದಾತ್ಮಕ ಟ್ವೀಟ್: ಕ್ಷಮೆಯಾಚಿಸಿದ ರಿಚಾ ಚಡ್ಡಾ
ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದ 2020ರ ಗಾಲ್ವಾನ್ ಘರ್ಷಣೆ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ಗುರುವಾರ ತಮ್ಮ ಟ್ವೀಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದಾರೆ.
Published: 24th November 2022 05:02 PM | Last Updated: 24th November 2022 05:02 PM | A+A A-

ರಿಚಾ ಚಡ್ಡಾ ಮಾಡಿದ ಟ್ವೀಟ್
ನವದೆಹಲಿ: ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದ 2020ರ ಗಾಲ್ವಾನ್ ಘರ್ಷಣೆ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ಗುರುವಾರ ತಮ್ಮ ಟ್ವೀಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಹೇಳಿದ್ದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಗೆ ಸೇನೆಯನ್ನು ಅವಮಾನಿಸುವ ರೀತಿಯಲ್ಲಿ ರಿಚಾ ಚಡ್ಡಾ ಪ್ರತಿಕ್ರಿಯಿಸಿದ್ದರು.
ಇದನ್ನು ಓದಿ: ಗಾಲ್ವಾನ್ ಸಂಘರ್ಷ ಕುರಿತು ಟ್ವೀಟ್ ಮಾಡಿ ಟ್ರೋಲ್ ಗೆ ತುತ್ತಾದ ನಟಿ ರಿಚಾ ಚಡ್ಡಾ
ಉಪೇಂದ್ರ ದ್ವಿವೇದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಿಚಾ, "ಗಾಲ್ವಾನ್ ಹಾಯ್ ಎನ್ನುತ್ತಿದೆ" ಎಂದು ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದರು.
ರಿಚಾ ಚಡ್ಡಾ ಅವರು ಭಾರತ ಮತ್ತು ಚೀನಾ ನಡುವಿನ 2020 ಘರ್ಷಣೆಯ ಬಗ್ಗೆ ಮಾತನಾಡುವ ಮೂಲಕ ಸೇನೆಯನ್ನು ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ ರಿಚಾ ಚಡ್ಡಾ ಅವರು ಟ್ವೀಟ್ ಮೂಲಕ ಕ್ಷಮೆಯಾಚಿಸುವ ಹೇಳಿಕೆ ಪೋಸ್ಟ್ ಮಾಡಿದ್ದು, "ಇದು ನನ್ನ ಉದ್ದೇಶಪೂರ್ವಕ ಪೋಸ್ಟ್ ಅಲ್ಲ. ವಿವಾದ ಸೃಷ್ಟಿಸಿರುವ ಆ ಮೂರು ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಅಥವಾ ನೋಯಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಸೇನೆಯಲ್ಲಿರುವ ನನ್ನ ಸಹೋದರರ ಬಗ್ಗೆ ನನಗೆ ಸದಾ ಗೌರವವಿದೆ. ನನ್ನ ಸ್ವಂತ ತಾತ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆಯನ್ನು ಅವಮಾನಿಸುವ ಅಥವಾ ನೋಯಿಸುವ ಯಾವ ಉದ್ದೇಶವೂ ಇರಲಿಲ್ಲ ಎಂದು ಹೇಳಿದ್ದಾರೆ.