ಮೊದಲ ವೀಕೆಂಡ್ ಕಲೆಕ್ಷನ್: ಸಂಜು, ದಂಗಲ್ ಹಿಂದಿಕ್ಕಿದ ಬ್ರಹ್ಮಾಸ್ತ್ರ; ಜಗತ್ತಿನಾದ್ಯಂತ 225 ಕೋಟಿ ರೂ. ಕಲೆಕ್ಷನ್

ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್‌ಹಿಟ್ ಚಿತ್ರಗಳನ್ನು ಮೀರಿಸಿದೆ.
ಚಿತ್ರದ ಫೋಟೋ
ಚಿತ್ರದ ಫೋಟೋ

ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್‌ಹಿಟ್ ಚಿತ್ರಗಳನ್ನು ಮೀರಿಸಿದೆ. ಚಿತ್ರದ ತೆಲುಗು ಅವತರಣಿಕೆಯೂ ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. 

'ಬ್ರಹ್ಮಾಸ್ತ್ರ ಮೊದಲ ಭಾಗ: ಶಿವ' ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಅದ್ಭುತ ಕಲೆಕ್ಷನ್ ಮಾಡಿದ್ದು ಇದು ವಾರಾಂತ್ಯದವರೆಗೂ ಮುಂದೂವರೆದಿದೆ. ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ವಿಶ್ವದಾದ್ಯಂತ 225 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಶತಕ ಬಾರಿಸಿದ ವರ್ಷದ ಮೊದಲ ಹಿಂದಿ ಚಿತ್ರ
ಈ ವರ್ಷ ಏಪ್ರಿಲ್ 14ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರ 'ಕೆಜಿಎಫ್ 2' ಮೊದಲ ವಾರಾಂತ್ಯದಲ್ಲಿ 193.99 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದುವರೆಗೆ ಹಿಂದಿಯಲ್ಲಿ ಬಿಡುಗಡೆಯಾದ ಚಲನಚಿತ್ರಗಳಲ್ಲಿ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆಯಾಗಿದೆ. ಈ ವರ್ಷ ಬಿಡುಗಡೆಯಾದ ಯಾವುದೇ ಹಿಂದಿ ಚಿತ್ರ ಅಥವಾ ಹಿಂದಿ ಡಬ್ಬಿಂಗ್ ಚಿತ್ರವು ಮೊದಲ ವಾರಾಂತ್ಯದಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಗಳಿಸಿಲ್ಲ. ಹಿಂದಿ ಚಿತ್ರ 'ಬ್ರಹ್ಮಾಸ್ತ್ರ ಭಾಗ ಒನ್: ಶಿವ' ಮೊದಲ ವಾರಾಂತ್ಯದಲ್ಲಿ ಇಷ್ಟು ದೊಡ್ಡ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಈ ವರ್ಷದ ಮೊದಲ ಚಿತ್ರವಾಗಿದೆ.

ಮೊದಲ ವಾರಾಂತ್ಯದಲ್ಲಿ 122.58 ಕೋಟಿ ರೂ. ಕಲೆಕ್ಷನ್
'ಬ್ರಹ್ಮಾಸ್ತ್ರ ಮೊದಲ ಭಾಗ: ಶಿವ' ಚಿತ್ರವು ಶುಕ್ರವಾರ 36.42 ಕೋಟಿ ರೂಪಾಯಿಗಳ ಓಪನಿಂಗ್‌ ಕಲೆಕ್ಷನ್ ನೊಂದಿಗೆ ಬಾಲಿವುಡ್ ಅನ್ನು ಮತ್ತು ಹಿಂದಿ ಚಲನಚಿತ್ರಗಳನ್ನು ಬಹಿಷ್ಕಾರದ ಪ್ರವೃತ್ತಿಯನ್ನು ಉತ್ತೇಜಿಸುವವರನ್ನು ಆಶ್ಚರ್ಯಗೊಳಿಸಿತು. ಮೊದಲ ದಿನದ ನಂತರ ಚಿತ್ರದ ಕಲೆಕ್ಷನ್ ಕುಸಿಯುತ್ತದೆ ಎಂದು ಚಿತ್ರ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದರು ಆದರೆ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಚಿತ್ರ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ. ಚಿತ್ರವು ಶನಿವಾರದಂದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 41.36 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಮತ್ತು ಭಾನುವಾರ ರಾತ್ರಿಯ ಪ್ರದರ್ಶನದ ನಂತರ ಆರಂಭಿಕ ಅಂಕಿಅಂಶಗಳ ಪ್ರಕಾರ 44.80 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಚಿತ್ರದ ಮೊದಲ ಮೂರು ದಿನಗಳ ದೇಶೀಯ ಬಾಕ್ಸ್ ಆಫೀಸ್ ಗಳಿಕೆ 122.58 ಕೋಟಿ ರೂ. ಆಗಿದೆ.

ಅಲ್ಲದೆ 'ದಂಗಲ್' ಮತ್ತು 'ಧೂಮ್ 3' ಚಿತ್ರವನ್ನು ಹಿಂದಿಕ್ಕಿದೆ
'ಬ್ರಹ್ಮಾಸ್ತ್ರ ಚಿತ್ರದ ನಿಜವಾದ ಪರೀಕ್ಷೆ ಸೋಮವಾರದಿಂದ ಪ್ರಾರಂಭವಾಗಲಿದ್ದು, ಕಚೇರಿಗಳು, ಅಂಗಡಿಗಳು ಮತ್ತು ಇತರ ಸಂಸ್ಥೆಗಳು ತೆರೆಯಲಿವೆ. ಇದರಿಂದ ಚಿತ್ರದ ಕಲೆಕ್ಷನ್ ಕುಸಿಯುವುದು ನಿಶ್ಚಿತ, ಆದರೆ ಭಾನುವಾರದ ಕಲೆಕ್ಷನ್‌ಗೆ ಹೋಲಿಸಿದರೆ ಸೋಮವಾರ ನಲವತ್ತು ಪರ್ಸೆಂಟ್ ಕಲೆಕ್ಷನ್ ಮಾಡಿದರೆ ಸೋಮವಾರ ಪರೀಕ್ಷೆಯಲ್ಲಿ ಪಾಸ್ ಆಗಲಿದೆ. 'ಬ್ರಹ್ಮಾಸ್ತ್ರ ಚಿತ್ರದ ಮೊದಲ ಮೂರು ದಿನಗಳ ಕಲೆಕ್ಷನ್ ಹಿಂದಿಯಲ್ಲಿ ತಯಾರಾದ ಅಥವಾ ಹಿಂದಿಯಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಎಂಟನೇ ಅತ್ಯುತ್ತಮ ಕಲೆಕ್ಷನ್ ಆಗಿದೆ. ಈ ಗಳಿಕೆಯೊಂದಿಗೆ ಚಿತ್ರವು ಮೊದಲ ವಾರಾಂತ್ಯದ ಗಳಿಕೆಯಲ್ಲಿ 'ಸಂಜು', 'ಟೈಗರ್ ಜಿಂದಾ ಹೈ', 'ಪದ್ಮಾವತ್', 'ಧೂಮ್ 3', 'ದಂಗಲ್' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರಗಳನ್ನು ಹಿಂದಿಕ್ಕಿದೆ.

ಮೊದಲ ವೀಕೆಂಡ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಚಿತ್ರಗಳು
1. ಕೆಜಿಎಫ್ ಅಧ್ಯಾಯ 2 (2022) 193.99
2. ಸುಲ್ತಾನ್ (2016) 180.36
3. ವಾರ್ (2019) 166.25
4. ಭಾರತ್ (2019) 150.10
5. ಪ್ರೇಮ್ ರತನ್ ಧನ್ ಪಾಯೋ (2015) 129.77
6. ಬಾಹುಬಲಿ 2 (2017) 128.00
7. ಥಗ್ಸ್ ಆಫ್ ಹಿಂದೂಸ್ತಾನ್ (2018) 123.00
8. ಬ್ರಹ್ಮಾಸ್ತ್ರ ಭಾಗ ಒಂದು: ಶಿವ (2022) 122.58
9. ಸಂಜು (2018) 120.06
10. ಟೈಗರ್ ಜಿಂದಾ ಹೈ (2017) 114.93

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com