ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿಗೆ ಷರತ್ತು ಬದ್ಧ ಜಾಮೀನು

ಡ್ರಗ್ಸ್ ಪ್ರಕರಣ ಸಂಬಂಧ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಅರ್ಮಾನ್ ಕೊಹ್ಲಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಷರತ್ತು ಬದ್ಧ ಜಾಮೀನು ನೀಡಿದೆ. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರ ಪೀಠವು ಒಂದು ಲಕ್ಷ...
ಅರ್ಮಾನ್ ಕೊಹ್ಲಿ
ಅರ್ಮಾನ್ ಕೊಹ್ಲಿ

ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಅರ್ಮಾನ್ ಕೊಹ್ಲಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಷರತ್ತು ಬದ್ಧ ಜಾಮೀನು ನೀಡಿದೆ. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರ ಪೀಠವು ಒಂದು ಲಕ್ಷ ರೂಪಾಯಿಗಳ ಶ್ಯೂರಿಟಿ ಮೇಲೆ ಜಾಮೀನು ನೀಡಿದೆ.

ಕೊಹ್ಲಿ ಮತ್ತೊಮ್ಮೆ ಇದೇ ರೀತಿಯ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಜಾಮೀನು ರದ್ದತಿಗೆ ಮುಂದಾಗಲು ಪ್ರಾಸಿಕ್ಯೂಷನ್‌ಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಎನ್‌ಸಿಬಿ ಪರವಾಗಿ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸಾತ್, ಎನ್‌ಸಿಬಿ ಕಚೇರಿಗೆ ಹಾಜರಾಗುವಂತೆ ಕೊಹ್ಲಿಗೆ ಸೂಚಿಸುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಪ್ರತಿ ತಿಂಗಳಿಗೊಮ್ಮೆ ಏಜೆನ್ಸಿಯ ದಕ್ಷಿಣ ಮುಂಬೈ ಕಚೇರಿಗೆ ಹಾಜರಾಗುವಂತೆ ನಟನಿಗೆ ಸೂಚಿಸಿದ ನ್ಯಾಯಮೂರ್ತಿ ಸಾಂಬ್ರೆ ಜಾಮೀನು ಮಂಜೂರು ಮಾಡಿದರು.

ಡ್ರಗ್ಸ್ ದಂಧೆಗೆ ಹಣಕಾಸು ಒದಗಿಸಿದ ಆರೋಪ ಮೇಲೆ ಕೊಹ್ಲಿಯನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಬಂಧಿಸಿತ್ತು. ಕೊಹ್ಲಿ ಪರ ವಾದ ಮಂಡಿಸಿದ ವಕೀಲರಾದ ತಾರಕ್ ಸಯಾದ್ ಮತ್ತು ಅಭಿಷೇಕ್ ಯೆಂಡೆ ಅವರು, ಕೊಹ್ಲಿ ಡ್ರಗ್ಸ್ ಸೇವಿಸಿದ್ದಾರೆ. ಆದರೆ ಡೀಲ್ ಮಾಡಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ಆರೋಪ ಹೊರಿಸಲಾಗುವುದಿಲ್ಲ ಎಂದು ಹೇಳಿದೆ.

ನೈಜೀರಿಯಾದ ಪ್ರಜೆ ಇಸ್ರೇಲ್ ಸ್ಯಾಮ್ ಅವರನ್ನು 55 ಗ್ರಾಂ ಮೆಫೆಡ್ರೋನ್ ಡ್ರಗ್ಸ್ ನೊಂದಿಗೆ ಎನ್‌ಸಿಬಿ ಬಂಧಿಸಿದೆ. ಕೊಹ್ಲಿ ಅವರ ಫೋನ್‌ ಪರಿಶೀಲಿಸಿದಾಗ ಇಸ್ರೇಲ್ ಸ್ಯಾಮ್ ನಿಂದ ಹಲವಾರು ಕರೆಗಳು ಮತ್ತು ಸಂದೇಶಗಳು ಬಂದಿವೆ, ಅವರು ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com