ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅಭಿನಯದ ಡ್ರೀಮ್ ಗರ್ಲ್ 2 ಚಿತ್ರದ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
'ಡ್ರೀಮ್ ಗರ್ಲ್ 2' ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಇದಕ್ಕೆ ತಡೆ ಕೋರಿ ಆಶಿಮ್ ಬಾಗ್ಚಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಿಯಾಜ್ ಚಾಗ್ಲಾ ಅವರ ಏಕ ಸದಸ್ಯ ಪೀಠ, ಚಲನಚಿತ್ರ ಬಿಡುಗಡೆಗೆ ತಡೆಯಾಜ್ಞೆ ಕೋರಿ ದಾವೆ ಮತ್ತು ಅರ್ಜಿಯನ್ನು ಆಗಸ್ಟ್ 18 ರಂದು ಮಾತ್ರ ಸಲ್ಲಿಸಲಾಗಿದೆ. ಕೊನೆ ಕ್ಷಣದಲ್ಲಿ ಚಲನಚಿತ್ರಗಳ ಬಿಡುಗಡೆ ಮಾಡುವುದನ್ನು ತಡೆಯಬಾರದು. ಮಧ್ಯಂತರ ಅರ್ಜಿಗೆ ತಮ್ಮ ಉತ್ತರವನ್ನು ಸಲ್ಲಿಸಲು ಪ್ರತಿವಾದಿಗಳಿಗೆ ಅವಕಾಶವನ್ನು ನೀಡಬೇಕು" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಮೇ 2007 ರಲ್ಲಿ ಫಿಲ್ಮ್ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ ಸ್ಕ್ರಿಪ್ಟ್‌ನಂತೆಯೇ ಚಿತ್ರದ ಕಥೆ ಇದೆ ಎಂದು ಆರೋಪಿಸಿ ಆಶಿಮ್ ಬಾಗ್ಚಿ ಅವರು ಮೊಕದ್ದಮೆ ದಾಖಲಿಸಿದ್ದಾರೆ.
ಹೈಕೋರ್ಟ್, ಪ್ರತಿವಾದಿಗಳಿಗೆ(ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್, ಕಂಪನಿಯ ನಿರ್ದೇಶಕರಾದ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್, ಥಿಂಕ್ ಇಂಕ್ ಪಿಕ್ಚರ್ಸ್ ಲಿಮಿಟೆಡ್‌ನ ರಾಜ್ ಶಾಂಡಿಲ್ಯ ಚಿತ್ರದ ಬರಹಗಾರರು ಮತ್ತು ನರೇಶ್ ಕಥೂರಿಯಾ) ದಾವೆಗೆ ಪ್ರತಿಕ್ರಿಯೆಯಾಗಿ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿದೆ.
Advertisement