‘ಕೆಜಿಎಫ್ 2’, ‘ಪಠಾಣ್’ ದಾಖಲೆ ಪತನ: 300 ಕೋಟಿ ರೂ ಕ್ಲಬ್ ಸೇರಿದ ‘ಗದರ್ 2’

ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ಬಾಲಿವುಡ್ ಚಿತ್ರ 'ಗದರ್ 2' ಹೊಸದೊಂದು ದಾಖಲೆ ನಿರ್ಮಿಸಿದ್ದು, ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಪತನ ಬಾಕ್ಸಾಫೀಸ್ ದಾಖಲೆ ನಿರ್ಮಿಸಿದೆ.
300 ಕೋಟಿ ರೂ ಕ್ಲಬ್ ಸೇರಿದ ‘ಗದರ್ 2’
300 ಕೋಟಿ ರೂ ಕ್ಲಬ್ ಸೇರಿದ ‘ಗದರ್ 2’

ಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ಬಾಲಿವುಡ್ ಚಿತ್ರ 'ಗದರ್ 2' ಹೊಸದೊಂದು ದಾಖಲೆ ನಿರ್ಮಿಸಿದ್ದು, ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಪತನ ಬಾಕ್ಸಾಫೀಸ್ ದಾಖಲೆ ನಿರ್ಮಿಸಿದೆ.

ಮೊದಲ ಶುಕ್ರವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದ 2ನೇ ಶುಕ್ರವಾರಕ್ಕೆ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗುತ್ತದೆ ಎಂಬುದು ಬಾಕ್ಸ್ ಆಫೀಸ್ ತಜ್ಞರ ಅಭಿಮತವಾಗಿತ್ತಾದರೂ, ಆದರೆ, ‘ಗದರ್ 2’ ಚಿತ್ರ ಈ ಎಲ್ಲ ಊಹೆಗಳನ್ನು ಸುಳ್ಳು ಮಾಡಿ ಚಿತ್ರ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದೆ. ಆಗಸ್ಟ್ 11ರಿಂದ ಇಲ್ಲಿಯವರೆಗೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಕೇವಲ 8 ದಿನಕ್ಕೆ ಈ ಚಿತ್ರ 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. 

‘ಕೆಜಿಎಫ್ 2’, ‘ಪಠಾಣ್’ ದಾಖಲೆ ಪತನ
ಈ ಮೂಲಕ ‘ಗದರ್ 2’ ಯಶ್ ನಟನೆಯ ‘ಕೆಜಿಎಫ್ 2’ ಹಾಗೂ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ (Pathaan Movie) ಮಾಡಿದ್ದ ದಾಖಲೆಯನ್ನು ಉಡೀಸ್ ಮಾಡಿದೆ. ಶನಿವಾರ (ಆಗಸ್ಟ್ 19) ಹಾಗೂ ನಾಳೆ (ಆಗಸ್ಟ್ 20) ಚಿತ್ರಕ್ಕೆ ಮತ್ತಷ್ಟು ಕಲೆಕ್ಷನ್ ಆಗಲಿದೆ. ಈ ಮೊದಲು ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’(19 ಕೋಟಿ ರೂಪಾಯಿ), ‘ದಂಗಲ್’ (18 ಕೋಟಿ ರೂಪಾಯಿ), ‘ಪಿಕೆ’ (15 ಕೋಟಿ ರೂಪಾಯಿ), ‘ಕೆಜಿಎಫ್ 2’ (11.25) ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದನ್ನು ‘ಗದರ್ 2’ ಹಿಂದಿಕ್ಕಿದೆ.

ಸನ್ನಿ ಡಿಯೋಲ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ‘ಗದರ್ 2’ ಚಿತ್ರದ ಮೂಲಕ ಅವರು ಅತಿ ದೊಡ್ಡ ಗೆಲುವು ಕಂಡಿದ್ದಾರೆ. 

ಬಾಕ್ಸ್ ಆಫೀಸ್ ತರಣ್ ಆದರ್ಶ್ ಟ್ವೀಟ್
ಸನ್ನಿ ಡಿಯೋಲ್ ಅಭಿನಯದ ಗದರ್ 2 ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿಗಳ ಗಡಿ ದಾಟಿದ ಬೆನ್ನಲ್ಲೇ ಈ ಬಗ್ಗೆ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, '300 ನಾಟ್ ಔಟ್' #Gadar2 ಘರ್ಜನೆಯನ್ನು ಮುಂದುವರೆಸಿದೆ' ಮಾಸ್ ಪಾಕೆಟ್‌ಗಳು ಸಂಪೂರ್ಣವಾಗಿ ವಿಭಿನ್ನ ಲೀಗ್‌ನಲ್ಲಿವೆ' ಅಲ್ಲದೆ, ಶ್ರೇಣಿ 2 ಮತ್ತು ಶ್ರೇಣಿ 3 ವಲಯಗಳ ಕೊಡುಗೆಯು ಹೊಸ ಮಾನದಂಡವನ್ನು ಹೊಂದಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com