
ಮುಂಬೈ: ರಾತ್ರಿ ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಟ ಸನ್ನಿ ಡಿಯೋಲ್, ಅದು ತನ್ನ ಮುಂಬರುವ ಚಲನಚಿತ್ರ ಸಫರ್ ಚಿತ್ರೀಕರಣದ ದೃಶ್ಯವಿದು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು, ಸಾರ್ವಜನಿಕವಾಗಿ ಆಪಾದಿತ ಅನುಚಿತ ವರ್ತನೆಗಾಗಿ ನಟ, ಬಿಜೆಪಿ ಸಂಸದನನ್ನು ನಿಂಧಿಸಿ ವ್ಯಾಪಕವಾಗಿ ಟೀಕಿಸಿದ್ದರು.
ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟೀಕಿಸಲಾದ ವಿಡಿಯೋವನ್ನು ಹಂಚಿಕೊಂಡಿರುವ ಸನ್ನಿ ಡಿಯೋಲ್,ಇದನ್ನು ವಿಭಿನ್ನ ಆಯಾಮದಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲಿ ಕ್ಯಾಮೆರಾಗಳ ಸೆಟ್ ನ್ನು ಫ್ರೇಮ್‌ನಲ್ಲಿ ಕಾಣಬಹುದು ಎಂದಿದ್ದಾರೆ.
ಸಫರ್ ಚಿತ್ರದ ನಿರ್ಮಾಣ ಸಂಸ್ಥೆಯಾದ ಎಚೆಲೋನ್ ಪ್ರೊಢಕ್ಷನ್ ನ ವಿಶಾಲ್ ರಾಣಾ ಕೂಡಾ ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆಯ
"ಇದು ನಮ್ಮ ಮುಂಬರುವ 'ಸಫರ್' ಚಿತ್ರದ ದೃಶ್ಯವಾಗಿದ್ದು, ಸನ್ನಿ ಪಾಜಿ ರಾತ್ರಿಯ ವೇಳಾಪಟ್ಟಿಯನ್ನು ಚಿತ್ರೀಕರಿಸುತ್ತಿದ್ದರು. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡದಂತೆ ಎಲ್ಲಾ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿದ್ದಾರೆ.
Advertisement