ಪತಿ ಆದಿಲ್ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ: ರಾಖಿ ಸಾವಂತ್ ಆರೋಪ
ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಅವರು ತಮ್ಮ ಪತಿ ಆದಿಲ್ ಖಾನ್ ದುರ್ರಾನಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ರಾಖಿ ಸಾವಂತ್ ಅವರು, ಪತಿ ಆದಿಲ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.
ಮರಾಠಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆದಿಲ್ ನನಗೆ ಮೋಸ ಮಾಡಿದ್ದಾರೆ. ಅವರಿಗೆ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ರಾಖಿ ಸಾವಂತ್ ಹೇಳಿದ್ದಾರೆ.
ಇದೇ ವೇಳೆ ಆದಿಲ್ ಸಂದರ್ಶನ ಮಾಡದಂತೆ ಮಾಧ್ಯಮದವರ ಬಳಿ ಮನವಿ ಮಾಡಿಕೊಂಡಿದ್ದಾರೆ. ನೀವು ಆದಿಲ್‌ನ ಯಾವುದೇ ಸಂದರ್ಶನಗಳನ್ನು ತೆಗೆದುಕೊಳ್ಳಬಾರದು. ಅವನನ್ನು ದೊಡ್ಡ ಸ್ಟಾರ್ ಮಾಡಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್ ಪ್ರವೇಶಿಸಲು ಬಯಸುತ್ತಿದ್ದಾನೆ. ನನ್ನ ಜೊತೆ ಬಂದರೆ ಆತ ಜಿಮ್‌ಗೆ ಬರುವುದಿಲ್ಲ. ಬದಲಾಗಿ ಮಾಧ್ಯಮಗಳ ಜೊತೆ ಸಂದರ್ಶನಗಳನ್ನು ನೀಡಲು ಇಲ್ಲಿಯೇ ಇರುತ್ತಾನೆ. ನಾನು ಅದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಆದಿಲ್ ಓರ್ವ ಸುಳ್ಳುಗಾರ. ಆ ಹುಡುಗಿಯನ್ನು ಬ್ಲಾಕ್ ಮಾಡುತ್ತೇನೆ ಎಂದು ಕುರಾನ್ ಮೇಲೆ ಆಣೆ ಮಾಡಿದ್ದ. ಆದರೆ, ಅದರಂತ ನಡೆದುಕೊಳ್ಳಲಿಲ್ಲ. ಇದೀಗ ಆ ಹುಡುಗಿ ಆತನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾಳೆ. ಅವಳ ಬಳಿ ಆದಿಲ್ ಕುರಿತ ಕೆಲವು ಕೊಳಕು ಸಾಕ್ಷಿಗಳು ಇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ರಾಖಿ ಸಾವಂತ್ ತಾಯಿ ನಿಧನರಾದಾಗ ಅವರ ಅಂತಿಮ ಸಂಸ್ಕಾರದಲ್ಲಿ ಆದಿಲ್ ಭಾಗವಹಿಸಿದ್ದರು. ಈ ವೇಳೆ ರಾಖಿ ಸಾವಂತ್ ಅವರು ಆದಿಲ್ ಎದೆಗೆ ಒರಗಿ ಅತ್ತಿದ್ದರು. ಆದರೆ ಆ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೀಗ ಆದಿಲ್ ವಿರುದ್ಧ ರಾಖಿ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ.
ರಾಖಿ ಸಾವಂತ್ ಮೈಸೂರು ಮೂಲದ ಉದ್ಯಮಿ ಆದಿಲ್‌ನನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದರು. ಇದು ಭಾರಿ ಸುದ್ದಿಯಾಗಿತ್ತು.
ರಾಖಿ ಸಾವಂತ್ ಆರೋಪಕ್ಕೆ ನೆಟ್ಟಿಗರು ಗರಂ ಆಗಿದ್ದು, ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ