
ಮುಂಬೈ: ತಾನು ಮನೆಯೊಳಗಿದ್ದಾಗ ಫೋಟೋಗ್ರಾಫರ್ ತೆಗೆದಿರುವ ಫೋಟೋಗಳು ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿ ಫೋಸ್ಟ್ ಮಾಡಿರುವ ನಟಿ, ಮುಂಬೈ ಪೊಲೀಸರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ. ಇಂದು ಎಲ್ಲಾ ಮಿತಿಗಳನ್ನು ಮೀರಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಫೋಟೋಗಳನ್ನು ಹಂಚಿಕೊಂಡಿರುವ ಆಲಿಯಾ ಭಟ್, “ನೀವು ನನ್ನನ್ನು ತಮಾಷೆ ಮಾಡುತ್ತಿದ್ದೀರಾ? ನಾನು ನನ್ನ ಮನೆಯಲ್ಲಿದ್ದೆ, ಮಧ್ಯಾಹ್ನದ ನಂತರ ಸಾಮಾನ್ಯವಾಗಿ ನನ್ನ ಕೊಠಡಿಯಲ್ಲಿ ಕುಳಿತಿದ್ದಾಗ ಯಾರೂ ನನನ್ನು ಗಮನಿಸುತ್ತಿರುವುದಾಗಿ ಅನಿಸಿತು. ನಾನು ತಲೆಯೆತ್ತಿ ನೋಡಿದಾಗ ಪಕ್ಕದ ಕಟ್ಟಡದ ಟೆರೇಸ್‌ನಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಕಡೆಗೆ ಕ್ಯಾಮೆರಾ ಹಿಡಿದಿರುವುದನ್ನು ಕಂಡೆ. ಯಾವ ಜಗತ್ತಿನಲ್ಲಿ ಇದು ಸರಿ ಮತ್ತು ಇದನ್ನು ಅನುಮತಿಸಲಾಗಿದೆಯೇ? ಇದು ಬೇರೊಬ್ಬರ ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ. ಕೆಲವೊಂದು ಮಿತಿಗಳಿವೆ, ಅವುಗಳನ್ನು ಮೀರಬಾರದು. ಇಂದು ಆ ಎಲ್ಲಾ ಮಿತಿಗಳನ್ನು ಮೀರಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಫೋಸ್ಟ್ ಗೆ ಅರ್ಜುನ್ ಕಫೂರ್, ಅಲಿಯಾ ಸಹೋದರಿ ಶಾಹೀನ್ ಭಟ್, ತಾಯಿ ಸೋನಿ ರಜ್ದಾನ್, ಅನುಷ್ಕಾ ಶರ್ಮಾ, ಜಾನ್ವಿ ಕಫೂರ್, ಕರಣ್ ಜೋಹರ್ ಮತ್ತು ಸ್ವರಾ ಭಾಸ್ಕರ್ ಸೇರಿದಂತೆ ಇತರ ಅನೇಕ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
Advertisement