ನಮ್ಮಲ್ಲಿ ನಾಲೈದು ಧರ್ಮಗಳಿವೆ, ಅವುಗಳಿಗೂ ಸೆನ್ಸಾರ್‌ ಮಂಡಳಿ ಇರಬೇಕು: ಪಠಾಣ್‌ ವಿವಾದ ಕುರಿತು ಜಾವೇದ್‌ ಅಖ್ತರ್‌

ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನಲ್ಲಿ ಬಳಸಲಾದ ಶಾಟ್ ಗಳಲ್ಲಿ ಬದಲಾವಣೆ ಮಾಡುವಂತೆ  ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ-  ಸಿಬಿಎಫ್ ಸಿ ನಿರ್ಮಾಪಕರಿಗೆ ಕೇಳಿದೆ
ಪಠಾಣ್ ಫೋಸ್ಟರ್, ಜಾವೇದ್ ಅಖ್ತರ್ ಸಾಂದರ್ಭಿಕ ಚಿತ್ರ
ಪಠಾಣ್ ಫೋಸ್ಟರ್, ಜಾವೇದ್ ಅಖ್ತರ್ ಸಾಂದರ್ಭಿಕ ಚಿತ್ರ

ಮುಂಬೈ: ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನಲ್ಲಿ ಬಳಸಲಾದ ಶಾಟ್ ಗಳಲ್ಲಿ ಬದಲಾವಣೆ ಮಾಡುವಂತೆ  ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ-  ಸಿಬಿಎಫ್ ಸಿ ನಿರ್ಮಾಪಕರಿಗೆ ಕೇಳಿದೆ ಎಂಬ ವರದಿಗಳ ನಡುವೆ, ಗೀತರಚನೆಕಾರ  ಜಾವೇದ್ ಅಖ್ತರ್, ಚಿತ್ರದಲ್ಲಿ ಯಾವುದು ಇರಬೇಕು, ಇರಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರ ಸೆನ್ಸರ್ ಬೋರ್ಡ್ ಗೆ ಇದ್ದು, ಅದರಲ್ಲಿ ಚಲನಚಿತ್ರ ನಿರ್ಮಾಪಕರು ನಂಬಿಕೆ ಹೊಂದಿರಬೇಕು ಎಂದು ಹೇಳಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದ ಟ್ರೈಲರ್ ಬಿಡುಗಡೆಗೆ ಮುನ್ನ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸಿಬಿಎಫ್ ಸಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಉಲ್ಲೇಖಿಸಿರುವ 77 ವರ್ಷದ ಹಿರಿಯ ಅಖ್ತರ್, ಸಾಂಗ್ ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಿರ್ಧರಿಸಿದು ನಾನು ಅಥವಾ ನೀವಲ್ಲ, ಅದಕ್ಕಾಗಿಯೇ ನಾವೆಲ್ಲ ಒಂದು ಏಜೆನ್ಸಿ ಹೊಂದಿದ್ದೇವೆ. ಅಲ್ಲಿರುವ ಸರ್ಕಾರದ ಪ್ರತಿನಿಧಿಗಳು, ಚಿತ್ರ ವೀಕ್ಷಿಸುವ ಸಮಾಜದ ಒಂದು ವರ್ಗ, ಚಿತ್ರದಲ್ಲಿ ಯಾವುದು ಇರಬೇಕು, ಇರಬಾರದು ಎಂಬುದನ್ನು ನಿರ್ಧರಿಸುತ್ತದೆ. ಸೆನ್ಸರ್ ಬೋರ್ಡ್ ಯಾವುದನ್ನು ತೆಗೆಯಲಿ ಅಥವಾ ಬಿಡಲಿ ಅದರಲ್ಲಿ ನಾವು ನಂಬಿಕೆ ಹೊಂದಿರಬೇಕು ಎಂದು ಅಖ್ತಾರ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ಜನವರಿ 25 ರಂದು ಬಿಡುಗಡೆಗೆ ಸಜ್ಜಾಗಿರುವ ಪಠಾಣ್ ಚಿತ್ರದಲ್ಲಿ ಬೇಷರಮ್ ರಂಗ್ ಹಾಡು ಮತ್ತು ಭಾರತೀಯ ಗುಪ್ತಚರ ಸಂಸ್ಥೆ ರಾ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ಹೆಸರು ತೆಗೆಯುವಂತೆ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಗೆ ಸಿಬಿಎಫ್ ಸಿ ಸಲಹೆ ನೀಡಿದೆ ಎಂದು ಹೇಳಿವೆ.

ಇತ್ತೀಚಿಗೆ ಸ್ಥಾಪಿತ ಧರ್ಮ ಸೆನ್ಸರ್ ಬೋರ್ಡ್ ಕುರಿತಂತೆ ಪ್ರತಿಕ್ರಿಯಿಸಿದ ಅಖ್ತರ್, ಧರ್ಮಗಳು ಕೂಡಾ ಸೆನ್ಸರ್ ಮಂಡಳಿ ಇರಬೇಕು, ನಮ್ಮಲ್ಲಿ ನಾಲ್ಕೈದು ಪ್ರಮುಖವಾದ ಧರ್ಮಗಳಿವೆ. ಅವುಗಳಿಗೂ ಸೆನ್ಸಾರ್ ಬೋರ್ಡ್ ಇರಬೇಕು.ನಂತರ ಮುಸ್ಲಿಂ ಧರ್ಮದಡಿ ಸಿನಿಮಾ ನೋಡುವುದನ್ನು ನಾವು ಪ್ರಾರಂಭಿಸುತ್ತೇವೆ. ಅದನ್ನು ಮೊದಲು ಮಾಡಿ ಎಂದು ಅಖ್ತರ್ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com