ನವಾಜುದ್ದೀನ್ ಸಿದ್ದಿಕಿಯನ್ನು ಬೆಂಬಲಿಸಿದ್ದಕ್ಕಾಗಿ ಆಲಿಯಾ ಸಿದ್ದಿಕಿ ಕೆಂಗಣ್ಣಿಗೆ ಕಂಗನಾ ರಣಾವತ್ ಗುರಿ!

ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ ಕೊನೆಯದಾಗಿ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ OTT 2' ನಲ್ಲಿ ಕಾಣಿಸಿಕೊಂಡಿದ್ದರು.
ಕಂಗನಾ-ನವಾಜುದ್ದೀನ್-ಆಲಿಯಾ
ಕಂಗನಾ-ನವಾಜುದ್ದೀನ್-ಆಲಿಯಾ
Updated on

ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ ಕೊನೆಯದಾಗಿ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ OTT 2' ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಪ್ರೇಕ್ಷಕರಿಂದ ಕಡಿಮೆ ಮತಗಳು ಬಂದ ಕಾರಣ ಕಳೆದ ವಾರ ಆಕೆಯನ್ನು ಮನೆಯಿಂದ ಹೊರಹಾಕಲಾಗಿತ್ತು.
ಈಗ ಆಲಿಯಾ ಮನೆಯಿಂದ ಹೊರಬಂದ ನಂತರ ಬಾಲಿವುಡ್ ನಟಿ ಕಂಗನಾ ರನೌತ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ವಿಚ್ಛೇದನದ ಸಮಯದಲ್ಲಿ ನವಾಜ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಕಂಗನಾ ಅವರ ಕಾಮೆಂಟ್‌ಗಳ ಬಗ್ಗೆ ಆಲಿಯಾ ಸಿದ್ದಿಕಿ ಮಾತನಾಡಿದ್ದಾರೆ. ಕಂಗನಾ ರಣಾವತ್ ಹೇಳುವುದನ್ನು ನಾನು ಹೆಚ್ಚು ಗಮನ ಹರಿಸುವುದಿಲ್ಲ. ಏಕೆಂದರೆ ಅವರ ಮಾತಿನಲ್ಲಿ ಯಾವುದೇ ಅರ್ಥವಿಲ್ಲ. ಆಕೆ ಎಲ್ಲದರಲ್ಲೂ ಮೂಗು ತೂರಿಸುತ್ತಾಳೆ. ಎಲ್ಲರ ಬಗ್ಗೆ ಮಾತನಾಡುತ್ತಾಳೆ ಎಂದು ಹೇಳಿದರು.

ಕಂಗನಾ ಹೊರತುಪಡಿಸಿ ಯಾರೂ ಏನನ್ನೂ ಹೇಳಲಿಲ್ಲ. ಏಕೆಂದರೆ ಕಂಗನಾ ನಿರ್ಮಿಸಿರುವ ಟಿಕು ವೆಡ್ಸ್ ಶೇರು ಚಿತ್ರವನ್ನು ಬೆಂಬಲಿಸಬೇಕಾಗಿದೆ. ನಿರ್ಮಾಪಕಿ ಮತ್ತು ಅವಳು ತನ್ನ ಚಿತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ಆ ಚಿತ್ರದ ನಟನಾದ ನವಾಜುದ್ದೀನ್ ಸಿದ್ಧಿಕಿ ಪರ ಮಾತನಾಡಿದ್ದಾಳೆ ಎಂದು ಅವರು ಹೇಳಿದರು.

ಆಲಿಯಾ ಮತ್ತು ನವಾಜುದ್ದೀನ್ ನಡುವಿನ ವಿವಾದದ ಸಂದರ್ಭದಲ್ಲಿ ಕಂಗನಾ ನವಾಜುದ್ದೀನ್ ಬೆಂಬಲಕ್ಕೆ ನಿಂತಿದ್ದು ಇಲ್ಲಿ ಉಲ್ಲೇಖಾರ್ಹ. ನಟಿ, ನವಾಜ್ ಸರ್ ಅವರನ್ನು ಅವರ ಮನೆಯ ಹೊರಗೆ ಈ ರೀತಿ ಅವಮಾನಿಸಲಾಗುತ್ತಿದೆ. ಅವರು ತಮ್ಮ ಕುಟುಂಬಕ್ಕೆ ತಮ್ಮದೆಲ್ಲವನ್ನು ನೀಡಿದರು. ಅವರು ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದರು. ನಟ ಚಿತ್ರೀಕರಣಕ್ಕಾಗಿ ರಿಕ್ಷಾದಲ್ಲಿ ಬರುತ್ತಿದ್ದರು. ಕಳೆದ ವರ್ಷವೇ ಅವರು ಈ ಬಂಗಲೆಯನ್ನು ಖರೀದಿಸಿದರು. ಆದರೆ ಈಗ ಅವರ ಮಾಜಿ ಪತ್ನಿ ಅದನ್ನು ಪಡೆಯಲು ಬಂದಿರುವುದು, ತುಂಬಾ ದುಃಖವಾಗಿದೆ ಎಂದು ಕಂಗನಾ ಹೇಳಿದ್ದರು.

ಈ ಹಿಂದೆ ಆಲಿಯಾ ಕೂಡ ನವಾಜುದ್ದೀನ್ ಮನೆಯಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ಆಲಿಯಾ ಮತ್ತು ನವಾಜ್ ವಿಚ್ಛೇದನದ ಕದನ ಎಲ್ಲರ ಗಮನ ಸೆಳೆದಿತ್ತು. ಇಬ್ಬರೂ ಪರಸ್ಪರರ ಮೇಲೆ ಹಲವಾರು ಆರೋಪಗಳನ್ನು ಹೊರಿಸಿದ್ದರು. ನವಾಜುದ್ದೀನ್ ತಮ್ಮ ಮಕ್ಕಳನ್ನು ದೂರ ಮಾಡಿದ್ದಾರೆ. ಸಿದ್ದಿಕಿ ತಾಯಿ ಮೆಹರುನಿಸಾ ಅವರು ಮುಂಬೈ ಮನೆಗೆ ಪ್ರವೇಶ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಆಲಿಯಾ ಆರೋಪಿಸಿದ್ದರು. ಆದಾಗ್ಯೂ, ಟಿಕು ವೆಡ್ಸ್ ಶೇರು ನಟ ಆರೋಪಗಳನ್ನು ನಿರಾಕರಿಸಿದ್ದು ಹಣಕ್ಕಾಗಿ ಆಲಿಯಾ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com