ಪುತ್ರಿ ಶ್ವೇತಾಗೆ 50 ಕೋಟಿ ರೂ. ಮೌಲ್ಯದ ಮುಂಬೈ ಬಂಗಲೆ ಗಿಫ್ಟ್ ನೀಡಿದ ಅಮಿತಾಬ್ ಬಚ್ಚನ್!

ತಮ್ಮ ಆಸ್ತಿಯಲ್ಲಿ ಇಬ್ಬರೂ ಮಕ್ಕಳಿಗೂ ಸಮಾನ ಪಾಲು ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದು ಸುದ್ದಿಯಾಗಿತ್ತು. 81 ವರ್ಷದ ಈ ಇಳಿವಯಸ್ಸಿನಲ್ಲಿಯೂ ಕೆಲಸದಲ್ಲಿ ಸಕ್ರಿಯವಾಗಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮುಂಬೈನ ಉಪನಗರ ಜುಹುದಲ್ಲಿರುವ ತಮ್ಮ ಬಂಗಲೆಯನ್ನು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದ
ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ನಂದ ಜೊತೆಗೆ(ಸಂಗ್ರಹ ಚಿತ್ರ)
ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ನಂದ ಜೊತೆಗೆ(ಸಂಗ್ರಹ ಚಿತ್ರ)

ಮುಂಬೈ: ತಮ್ಮ ಆಸ್ತಿಯಲ್ಲಿ ಇಬ್ಬರೂ ಮಕ್ಕಳಿಗೂ ಸಮಾನ ಪಾಲು ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದು ಸುದ್ದಿಯಾಗಿತ್ತು. 81 ವರ್ಷದ ಈ ಇಳಿವಯಸ್ಸಿನಲ್ಲಿಯೂ ಕೆಲಸದಲ್ಲಿ ಸಕ್ರಿಯವಾಗಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮುಂಬೈನ ಉಪನಗರ ಜುಹುದಲ್ಲಿರುವ ತಮ್ಮ ಬಂಗಲೆಯನ್ನು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಬಿಗ್ ಬಿ ಅವರ ಮುಂಬೈಯ ‘ಪ್ರತೀಕ್ಷಾ’ ಬಂಗಲೆಯ ಮೌಲ್ಯ 50.63 ಕೋಟಿ ರೂಪಾಯಿಗೂ ಹೆಚ್ಚು. ಇದು ಮುಂಬೈನಲ್ಲಿ ಮೆಗಾಸ್ಟಾರ್ ಅವರ ಮೊದಲ ಹಾಗೂ ಮುಂಬೈಯಲ್ಲಿ ಹೊಂದಿರುವ ಮೂರು ಬಂಗಲೆಗಳಲ್ಲಿ ಒಂದಾಗಿದೆ.

ಆಸ್ತಿ ನೋಂದಣಿ ಡೇಟಾ ಸಂಗ್ರಾಹಕ Zapkey.com ನಿಂದ ಸಿಕ್ಕಿರುವ ದಾಖಲೆಗಳ ಪ್ರಕಾರ, ಅಮಿತಾಬ್ ಬಚ್ಚನ್ ಅವರು ನವೆಂಬರ್ 9 ರಂದು ತಮ್ಮ ಮಗಳಿಗೆ ಉಡುಗೊರೆಯಾಗಿ ಬಂಗಲೆಯನ್ನು ವರ್ಗಾಯಿಸಿದ್ದಾರೆ. 50 ಕೋಟಿಯ 65 ಲಕ್ಷ ರೂಪಾಯಿ ಬೆಲೆಯ ಬಂಗಲೆಗೆ 50.65 ಲಕ್ಷ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ. 

ವಿಠ್ಠಲನಗರ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿರುವ ಬಂಗಲೆಯು 674 ಚದರ ಮೀಟರ್ ಮತ್ತು 890.47 ಚದರ ಮೀಟರ್ ವಿಸ್ತೀರ್ಣದ ಎರಡು ಪ್ಲಾಟ್‌ಗಳಲ್ಲಿ ಹರಡಿಕೊಂಡಿದೆ, ಇವುಗಳ ಒಟ್ಟಾರೆ ಮೌಲ್ಯ 50.63 ಕೋಟಿ ರೂಪಾಯಿಯಾಗಿದೆ. ಉಡುಗೊರೆಯಾಗಿ ನೀಡಿರುವ ಎರಡು ನಿವೇಶನಗಳಿಗೆ 200 ರೂಪಾಯಿ ನೋಂದಣಿ ಶುಲ್ಕವನ್ನೂ ಪಾವತಿಸಿದ್ದಾರೆ.

890.47 ಚದರ ಮೀಟರ್‌ನ ದೊಡ್ಡ ಬಂಗಲೆ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಒಡೆತನದಲ್ಲಿದ್ದರೆ, ಚಿಕ್ಕದಾದ ಬಂಗಲೆ ಅಮಿತಾಬ್ ಬಚ್ಚನ್ ಅವರದ್ದಾಗಿತ್ತು.

ಬಚ್ಚನ್ ಅವರ ಕಚೇರಿಯಿಂದ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪ್ರತೀಕ್ಷಾ ಜಲ್ಸಾದಲ್ಲಿ ಐಶ್ವರ್ಯಾ-ಅಭಿಷೇಕ್ ಮದುವೆ: ಅಮಿತಾಬ್ ಅವರ ಪುತ್ರ ಅಭಿಷೇಕ್ ಬಚ್ಚನ್ ನಟಿ ಐಶ್ವರ್ಯ ರೈ ಅವರ ವಿವಾಹ ಸಮಾರಂಭ 2007 ರಲ್ಲಿ 'ಪ್ರತೀಕ್ಷಾ' ಮತ್ತು 'ಜಲ್ಸಾ' ಬಂಗಲೆಗಳಲ್ಲಿ ನಡೆದವು. ಅವರ ಮುಂಬೈಯಲ್ಲಿನ ಮೂರನೇ ಬಂಗಲೆಯಾದ 'ಜನಕ್' ನ್ನು ಪ್ರಸ್ತುತ ಅಮಿತಾಬ್ ಬಚ್ಚನ್ ಕಚೇರಿಯನ್ನಾಗಿ ಬಳಸುತ್ತಿದ್ದಾರೆ. 

ಅಮಿತಾಬ್ ಅವರ ತಂದೆ ಕವಿ ಹರಿವಂಶರಾಯ್ ಬಚ್ಚನ್ ಈ ಬಂಗಲೆಗೆ ಪ್ರತೀಕ್ಷಾ ಎಂದು ಹೆಸರಿಟ್ಟಿದ್ದರಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com