'ಸಿಂಗಂ ಅಗೈನ್' ಸೆಟ್‌ನ ರಾತ್ರಿಯ ಚಿತ್ರೀಕರಣದ ಫೋಟೋ ಹಂಚಿಕೊಂಡ ರೋಹಿತ್ ಶೆಟ್ಟಿ!

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ತಮ್ಮ ಸೂಪರ್‌ಹಿಟ್ ಸಿಂಗಂ ಸರಣಿಯ ಮುಂದಿನ ಚಿತ್ರ ಸಿಂಗಮ್ ಅಗೈನ್ನೊಂದಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಕೈಯಲ್ಲಿ 'ಪೊಲೀಸ್' ಎಂದು ಬರೆದಿರುವ ಫೋಟೋವನ್ನು...
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ಮುಂಬೈ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ತಮ್ಮ ಸೂಪರ್‌ಹಿಟ್ ಸಿಂಗಂ ಸರಣಿಯ ಮುಂದಿನ ಚಿತ್ರ ಸಿಂಗಮ್ ಅಗೈನ್ನೊಂದಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಕೈಯಲ್ಲಿ 'ಪೊಲೀಸ್' ಎಂದು ಬರೆದಿರುವ ಫೋಟೋವನ್ನು Instagram ಸ್ಟೋರಿಸ್ನಲ್ಲಿ ಹಂಚಿಕೊಂಡಿದ್ದು ಇದರೊಂದಿಗೆ ಅವರು 'ಸಿಂಗಮ್ ನೈಟ್ ಶೂಟ್ಸ್ ಎಗೇನ್' ಎಂದು ಬರೆದಿದ್ದಾರೆ.

ಇಂದು ಬೆಳಿಗ್ಗೆ ರೋಹಿತ್ ಚಿತ್ರದ ರಾತ್ರಿ ಚಿತ್ರೀಕರಣದ ಫೋಟೋವನ್ನು ಹಂಚಿಕೊಂಡಿದ್ದಾರೆ. ರೋಹಿತ್ ತಮ್ಮ ಮುಂದೋಳಿನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ರಾತ್ರಿಯ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರೋಹಿತ್ ಬಗ್ಗೆ ಬರೆದುಕೊಂಡಿದ್ದರು. ಅದರಲ್ಲಿ ಅವರು ಸಿಂಬಾ ಚಿತ್ರದ ನೋಟವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ‘ಸಿಂಗಂ ಅಗೇನ್’ ಚಿತ್ರದಲ್ಲಿ ಸಿಂಬಾ ಪಾತ್ರವನ್ನು ರಿಪೀಟ್ ಮಾಡಲು ಅವರು ತಯಾರಾಗಿದ್ದಾರಂತೆ. ಈ ಚಿತ್ರದಲ್ಲಿ, ರಣವೀರ್ ಅಭಿಮಾನಿಗಳಿಗೆ ಕಪ್ಪು ವೆಸ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಧರಿಸಿರುವ ತನ್ನ ಸಿಕ್ಸ್ ಪ್ಯಾಕ್ ದೇಹವನ್ನು ತೋರಿಸಿದರು.

ಹಿಂದಿಯ 'ಸಿಂಗಂ' ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದರ ನಂತರ 2014ರಲ್ಲಿ 'ಸಿಂಗಮ್ ರಿಟರ್ನ್ಸ್' ಬಂದಿತು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಸಿಂಗಂ ಅಗೈನ್ ದೀಪಿಕಾ ಮತ್ತು ಅಜಯ್ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 

ಇದರ ಜೊತೆಗೆ ರೋಹಿತ್ ಶೆಟ್ಟಿ ಇಂಡಿಯನ್ ಪೊಲೀಸ್ ಪೋರ್ಸ್ ವೆಬ್ ಸಿರೀಸ್ ಮೂಲಕ OTTಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ, ಶಿಲ್ಪಾ ಶೆಟ್ಟಿ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಸರಣಿಯು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗುತ್ತದೆ. ಆದರೂ ಅಧಿಕೃತ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com