ಕೊನೆಗೂ ಇಸ್ರೇಲ್‌ನಿಂದ ಮುಂಬೈಗೆ ಮರಳಿದ ನಟಿ ನುಶ್ರತ್ ಭರುಚ್ಚಾ!

ಸಂಘರ್ಷ ಪೀಡಿತ ಇಸ್ರೇಲ್ ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಭಾನುವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಮನೆಗೆ ತೆರಳಿದ್ದಾರೆ.
ನಟಿ ನುಶ್ರತ್ ಭರುಚ್ಚಾ
ನಟಿ ನುಶ್ರತ್ ಭರುಚ್ಚಾ
Updated on

ಮುಂಬೈ: ಸಂಘರ್ಷ ಪೀಡಿತ ಇಸ್ರೇಲ್ ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಭಾನುವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಮನೆಗೆ ತೆರಳಿದ್ದಾರೆ.

ಹೈಫಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಇಸ್ರೇಲ್ ಗೆ ತೆರಳಿದ್ದರು. ಆದರೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಅವರು ಅಲ್ಲಿ ಸಿಲುಕಿಕೊಂಡಿದ್ದರು. 

ಇದಕ್ಕೂ ಮುನ್ನಾ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ  ನುಶ್ರತ್ ಭರುಚ್ಚ ತಂಡದ ಸದಸ್ಯೆ ಸಂಚಿತಾ ತ್ರಿವೇದಿ, ನುಶ್ರತ್ ಅವರೊಂದಿಗೆ ಸಂಪರ್ಕದಲ್ಲಿದ್ದು, ರಾಯಭಾರ ಕಚೇರಿಯ ಸಹಾಯದಿಂದ ಸುರಕ್ಷಿತವಾಗಿ ಮನೆಗೆ ಕರೆತರಲಾಗುತ್ತಿದೆ. ನಮಗೆ ನೇರ ವಿಮಾನ ಸಿಗಲಿಲ್ಲ ಆದ್ದರಿಂದ ಅವರು ಸಂಪರ್ಕ ವಿಮಾನದಲ್ಲಿ ಮುಂಬೈನತ್ತ ಹೊರಟಿದ್ದಾರೆ. ಅವರು ಸುರಕ್ಷಿತವಾಗಿದ್ದು, ಭಾರತದತ್ತ ಹೊರಟಿರುವುದಾಗಿ ತಿಳಿಸಿದರು. 

ಸಂಘರ್ಷದ ಕುರಿತು ಮಾತನಾಡಿದ ಅವರು ಶನಿವಾರ ಬೆಳಿಗ್ಗೆ 6:30 ರ ಸುಮಾರಿಗೆ (ಸ್ಥಳೀಯ ಕಾಲಮಾನ), ಗಾಜಾದಿಂದ ಇಸ್ರೇಲ್‌ಗೆ ರಾಕೆಟ್ ಗುಂಡಿನ ಸುರಿಮಳೆ ಪ್ರಾರಂಭವಾಯಿತು, ಟೆಲ್ ಅವಿವ್, ರೆಹೋವೊಟ್, ಗೆಡೆರಾ ಮತ್ತು ಅಶ್ಕೆಲೋನ್ ಸೇರಿದಂತೆ ಹಲವಾರು ನಗರಗಳ ಮೇಲೆ ದಾಳಿ ನಡೆದಿದ್ದು, ಗಾಜಾದಿಂದ ಅನೇಕ ಹಮಾಸ್ ಉಗ್ರರು ಇಸ್ರೋಲ್ ಪ್ರವೇಶಿಸಿದರು ಎಂದು ತಿಳಿಸಿದರು. ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಿಂದ ಸಾವಿನ ಸಂಖ್ಯೆ ಮೃತಪಟ್ಟವರ ಸಂಖ್ಯೆ 300 ದಾಟಿದೆ ಮತ್ತು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 1,590 ಜನರು ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳ ವರದಿಗಳು ಹೇಳಿವೆ. 

ನುಶ್ರತ್ ಇತ್ತೀಚೆಗೆ ಕಳೆದ ತಿಂಗಳು ಬಿಡುಗಡೆಯಾದ 'ಅಕೇಲಿ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಲನಚಿತ್ರವು ಯುದ್ಧ ಪೀಡಿತ ಇರಾಕ್‌ನಲ್ಲಿ ಸಿಲುಕಿರುವ ಭಾರತೀಯ ಮಹಿಳೆ ಹಾಗೂ ಬದುಕಿಗಾಗಿ ಆಕೆ ನಡೆಸುವ ಹೋರಾಟದ ಕಥಾ ಹಂದರ ಹೊಂದಿದೆ. 'ಅಕೆಲ್ಲಿ' ಚಿತ್ರವನ್ನು ಪ್ರಣಯ್ ಮೇಶ್ರಾಮ್ ಅವರು ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com