ಮಧ್ಯರಾತ್ರಿ ಮನೆಯಿಂದ ಹೊರಗೆ ಅಭಿಮಾನಿಗಳತ್ತ ಕೈಬೀಸಿದ ಅಮಿತಾಬ್ ಬಚ್ಚನ್
ಮಧ್ಯರಾತ್ರಿ ಮನೆಯಿಂದ ಹೊರಗೆ ಅಭಿಮಾನಿಗಳತ್ತ ಕೈಬೀಸಿದ ಅಮಿತಾಬ್ ಬಚ್ಚನ್

ಬಾಲಿವುಡ್ ಬಿಗ್ ಬಿಗೆ 81 ವರ್ಷದ ಹುಟ್ಟುಹಬ್ಬ: ಮಧ್ಯರಾತ್ರಿ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಕೈ ಮುಗಿದ 'ಬಚ್ಚನ್'

ಇಂದು ಅಕ್ಟೋಬರ್ 11, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 81 ನೇ ಹುಟ್ಟುಹಬ್ಬ. ಇಂದು ಬುಧವಾರ ಮಧ್ಯರಾತ್ರಿಯಿಂದಲೇ ಶುಭಾಶಯಗಳ ಮಹಾಪೂರವೇ ದೇಶಾದ್ಯಂತ ಅವರ ಅಭಿಮಾನಿಗಳಿಂದ ಹರಿದು ಬರಲಾರಂಭಿಸಿದೆ. 

ಮುಂಬೈ: ಇಂದು ಅಕ್ಟೋಬರ್ 11, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 81 ನೇ ಹುಟ್ಟುಹಬ್ಬ. ಇಂದು ಬುಧವಾರ ಮಧ್ಯರಾತ್ರಿಯಿಂದಲೇ ಶುಭಾಶಯಗಳ ಮಹಾಪೂರವೇ ದೇಶಾದ್ಯಂತ ಅವರ ಅಭಿಮಾನಿಗಳಿಂದ ಹರಿದು ಬರಲಾರಂಭಿಸಿದೆ. 

ಪ್ರತಿ ಭಾನುವಾರದಂದು ತಮ್ಮ ನಿವಾಸದ ಹೊರಗೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಯ ಕೋರುವುದು ಅಮಿತಾಬ್ ಬಚ್ಚನ್ ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದಿರುವ ಸಂಪ್ರದಾಯ. ಇಂದು ಅವರ ಹುಟ್ಟುಹಬ್ಬದ ದಿನ ಮಧ್ಯರಾತ್ರಿ ಅವರು ತಮ್ಮ ಮನೆಯ ಹೊರಬಂದು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ಕೈಬೀಸಿ ನಕ್ಕು ಧನ್ಯವಾದ ಹೇಳಿದರು.

ಮುಂಬೈನ ತಮ್ಮ ನಿವಾಸ ಜಲ್ಸಾದ ಹೊರಗೆ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ದರ್ಶನ ನೀಡಿದರು ಅಮಿತಾಭ್. ಈ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿ, ಸೂಪರ್‌ಸ್ಟಾರ್, ಸ್ಟೂಲ್‌ನ ಮೇಲೆ ನಿಂತಿದ್ದು, ತಮ್ಮ ಅಭಿಮಾನಿಗಳನ್ನು ಕೈ ಜೋಡಿಸಿ ಸ್ವಾಗತಿಸುವುದನ್ನು ಕಾಣಬಹುದು, ಅವರತ್ತ ಕೈ ಬೀಸುತ್ತಾ ನಗುತ್ತಿದ್ದಾರೆ. ಮನೆಯಿಂದ ಹೊರಗೆ ಬಂದ ತಕ್ಷಣ ಅಭಿಮಾನಿಗಳು ಜೈಕಾರ ಕೂಗಿ ಸ್ವಾಗತಿಸುತ್ತಾರೆ.

ಈ ವಿಡಿಯೊದ ಹಿನ್ನಲೆಯಲ್ಲಿ ಐಶ್ವರ್ಯಾ ರೈ ಬಚ್ಚನ್, ಮೊಮ್ಮಗಳು ನವ್ಯಾ ನವೇಲಿ ಮತ್ತು ಆರಾಧ್ಯ ತಮ್ಮ ತಮ್ಮ ಫೋನ್‌ಗಳಲ್ಲಿ ತಾತನ ಜನ್ಮದಿನದ ಸುಂದರ ಕ್ಷಣಗಳ ಚಿತ್ರಗಳನ್ನು ತೆಗೆದುಕೊಳ್ಳುವುದನ್ನು ನೋಡಬಹುದು. 

ಇನ್ನು ವೃತ್ತಿಯ ವಿಚಾರ ಬಂದಾಗ ಬಿಗ್ ಬಿ ಕೊನೆಯದಾಗಿ ಅನುಪಮ್ ಖೇರ್, ಪರಿಣಿತಿ ಚೋಪ್ರಾ ಮತ್ತು ಬೋಮನ್ ಇರಾನಿ ಅವರೊಂದಿಗೆ ಕೌಟುಂಬಿಕ ಚಿತ್ರ ಉಂಚೈನಲ್ಲಿ ಕಾಣಿಸಿಕೊಂಡರು. ಸೂರಜ್ ಬರ್ಜಾತ್ಯಾ ಅವರು ನಿರ್ದೇಶಿಸಿದ ಈ ಚಿತ್ರವು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಅಮಿತಾಭ್ ಬಚ್ಚನ್ ಅವರು ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಜೊತೆಗೆ ಕಲ್ಕಿ 2898 ಎಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಭು ದಾಸ್‌ಗುಪ್ತಾ ಅವರ ಕೋರ್ಟ್‌ರೂಮ್ ನಾಟಕ ಸೆಕ್ಷನ್ 84 ರಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. 32 ವರ್ಷಗಳ ನಂತರ, ಅಮಿತಾಬ್ ಬಚ್ಚನ್ ತಲೈವರ್ 170 ರಲ್ಲಿ ರಜನಿಕಾಂತ್ ಅವರೊಂದಿಗೆ ಮತ್ತೆ ಒಂದಾಗುತ್ತಾರೆ. ಟಿಜೆ ಜ್ಞಾನವೇಲ್ ತಲೈವರ್ 170 ನ್ನು ನಿರ್ದೇಶಿಸಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com